ADVERTISEMENT

ಸೆಲೆಬ್ರಿಟಿ ಖ್ಯಾತಿಯ ಹುಲಿ ‘ಮಾಯಾ’ ಸಾವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2023, 14:50 IST
Last Updated 19 ನವೆಂಬರ್ 2023, 14:50 IST
<div class="paragraphs"><p>ಹುಲಿ </p></div>

ಹುಲಿ

   

ಮುಂಬೈ: ಮಹಾರಾಷ್ಟ್ರದ ತಾಡೋಬಾ ರಾಷ್ಟ್ರೀಯ ಉದ್ಯಾನದಲ್ಲಿದ್ದ ಮಾಯಾ ಹೆಸರಿನ ಹುಲಿಯು ಮೃತಪಟ್ಟಿದೆ.

ಭಾರತದಲ್ಲೇ ಅತಿಹೆಚ್ಚು ಛಾಯಾಚಿತ್ರಗಳನ್ನು ಹೊಂದಿರುವ ಖ್ಯಾತಿಯ ಹಾಗೂ ‘ತಾಡೋಬಾ ರಾಷ್ಟ್ರೀಯ ಉದ್ಯಾನದ ರಾಣಿ’ ಎಂದು ಪ್ರಖ್ಯಾತವಾಗಿದ್ದ ಹುಲಿಯ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ನಾಪತ್ತೆಯಾಗಿದ್ದ ಹುಲಿಯ ಶೋಧಕ್ಕಾಗಿ ಶನಿವಾರ ತಾಡೋಬಾ ಅರಣ್ಯದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ‘ಮಾಯಾ’ ಹುಲಿಯದ್ದು ಎನ್ನಲಾದ ಅಸ್ಥಿಪಂಜರವು ಪತ್ತೆಯಾಗಿದ್ದು, ಅದರ ಗುರುತು ಪತ್ತೆಗಾಗಿ ಡಿಎನ್ಎ ಮಾದರಿಯನ್ನು ಸಂಗ್ರಹಿಸಲಾಗಿದೆ. ಹುಲಿಯ ಡಿಎನ್ಎ ಪರೀಕ್ಷೆಯು ಬೆಂಗಳೂರಿನಲ್ಲಿ ನಡೆಯಲಿದ್ದು, ನವೆಂಬರ್ 30ರಂದು ಅದರ ವರದಿ ಬರಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

 2010ರಲ್ಲಿ ಲೀಲಾ ಎಂಬ ಹುಲಿಗೆ ಮಾಯಾ ಜನಿಸಿದ್ದಳು. ಆ ಬಳಿಕ ಮಾಯಾ ಒಟ್ಟಾರೆ 13 ಹುಲಿಗಳಿಗೆ ಜನ್ಮ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.