ನವದೆಹಲಿ: ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನಗಣತಿ 2021ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಸಂಬಂಧ ಲಿಖಿತ ಹೇಳಿಕೆ ನೀಡಿದರು. ಜನಗಣತಿ ಕಾಯ್ದೆ 1948ರ ಅನ್ವಯ ಎರಡು ಹಂತದಲ್ಲಿ ಗಣತಿ ಚಟುವಟಿಕೆಗಳನ್ನು ನಡೆಸಬೇಕಾಗಿತ್ತು ಎಂದೂ ತಿಳಿಸಿದರು.
ಏಪ್ರಿಲ್–ಸೆಪ್ಟೆಂಬರ್ 2020ರಲ್ಲಿ ಮನೆಗಣತಿ, ಫೆಬ್ರುವರಿ 9–28, 2021ರ ಅವಧಿಯಲ್ಲಿ ಜನಗಣತಿ ನಡೆಯಬೇಕಿತ್ತು. ಈ ಚಟುವಟಿಕೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಭೌಗೋಳಿಕ ಹಾಗೂ ಸಾಮಾಜಿಕ–ಆರ್ಥಿಕ ಮಾನದಂಡಗಳು ಅಂದರೆ ಪರಿಶಿಷ್ಟರು, ಧರ್ಮ, ಭಾಷೆ, ವೈವಾಹಿಕ ಸ್ಥಿತಿ, ಅಂಗವಿಕಲತೆ, ಉದ್ಯೋಗ, ವಲಸೆ ಅಂಶಗಳನ್ನು ಆಧರಿಸಿ ಗಣತಿ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ... ಸಿಎಎ ನಿಯಮ ರಚನೆಗೆ ಜ.9ರ ತನಕ ಕಾಲಾವಕಾಶ ಕೋರಿದ ಕೇಂದ್ರ ಸರ್ಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.