ADVERTISEMENT

2021ರ ಜನಗಣತಿಯಲ್ಲಿ ಒಬಿಸಿ ಸಮುದಾಯದ ಮಾಹಿತಿ ಸಂಗ್ರಹಿಸಲಿದೆ ಕೇಂದ್ರ ಸರ್ಕಾರ

ಪಿಟಿಐ
Published 31 ಆಗಸ್ಟ್ 2018, 20:29 IST
Last Updated 31 ಆಗಸ್ಟ್ 2018, 20:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ : 2021ರ ಜನಗಣತಿಯಲ್ಲಿಇದೇ ಮೊದಲ ಬಾರಿಗೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಜನಗಣತಿ ಕಾರ್ಯಕ್ರಮದ ತಯಾರಿಯನ್ನು ಪರಿಶೀಲಿಸಿದ ನಂತರ ಮಾಹಿತಿ ನೀಡಿದಸಚಿವಾಲಯದ ವಕ್ತಾರರು,‘2021ರ ಜನಗಣತಿಯ ದತ್ತಾಂಶವನ್ನು ಅಧರಿಸಿ ಮೂರು ವರ್ಷದೊಳಗೆ ವರದಿ ಸಿದ್ಧಪಡಿಸಲಾಗುವುದು.ಮೊದಲಿನಂತೆ ಏಳೆಂಟು ವರ್ಷ ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.

ಜನಗಣತಿ ದತ್ತಾಂಶವನ್ನು ಮೂರು ವರ್ಷಗಳೊಳಗೆ ಪರಿಶೀಲಿಸಿ ವರದಿ ಸಿದ್ಧಪಡಿಸಲು ವಿನ್ಯಾಸ ಮತ್ತು ತಾಂತ್ರಿಕ ಸುಧಾರಣೆಗಳನ್ಳು ಅಳವಡಿಸಿಕೊಳ್ಳಲಾಗುತ್ತಿದೆ. 25 ಲಕ್ಷ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ. ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.