ಹ್ಯೂಸ್ಟನ್: ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರು ಹ್ಯೂಸ್ಟನ್‌ಗೆ ಭೇಟಿ ನೀಡಿ 100 ವರ್ಷಗಳು ಸಂದಿರುವ ಸಂದರ್ಭದಲ್ಲಿ, ತೀವ್ರ ಚಳಿಯ ನಡುವೆಯೇ ಇಲ್ಲಿ ಶತಮಾನೋತ್ಸವನ್ನು ಆಚರಿಸಲಾಯಿತು.
ಫೆಬ್ರುವರಿ 1921ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಹ್ಯೂಸ್ಟನ್‌ಗೆ ಭೇಟಿ ನೀಡಿದ್ದರು.
ಟ್ಯಾಗೂರ್ ಸೊಸೈಟಿ ಆಫ್ ಹ್ಯೂಸ್ಟನ್ (ಟಿಎಸ್‌ಎಚ್) ಎರಡು ದಿನ ಕಾರ್ಯಕ್ರಮವನ್ನು ಹ್ಯೂಸ್ಟನ್‌ನ ರೇ ಮಿಲ್ಲರ್ ಪಾರ್ಕ್‌ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹ್ಯೂಸ್ಟನ್‌ನ ಕಾನ್ಸುಲ್ ಜನರಲ್ ಅಸೀಮ್ ಮಹಾಜನ್ ಸೇರಿದಂತೆ ಟಿಎಸ್‌ಎಚ್‌ನ ಇತರೆ ಸದಸ್ಯರು ಉಪಸ್ಥಿತರಿದ್ದರು.
2013ರಲ್ಲಿ ರೇ ಮಿಲ್ಲರ್ ಪಾರ್ಕ್‌ನಲ್ಲಿ ಟ್ಯಾಗೋರ್ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.