ADVERTISEMENT

ಅವರ ಆಸೆಯೇ ಇವರಿಗೆ ನಿರಾಸೆ, ಅವರು ಹಾಗಂದ್ರು ಇವರು ಹೀಗಂದ್ರು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 11:57 IST
Last Updated 1 ಫೆಬ್ರುವರಿ 2019, 11:57 IST
   

ನವದೆಹಲಿ: 2019–20ನೇ ಸಾಲಿನ ಕೇಂದ್ರ ಬಜೆಟ್‌ಗೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದ್ದು ಇದು ನಿರಾಶದಾಯಕಬಜೆಟ್‌ ಎಂದು ಹೇಳಿವೆ. ಆದರೆ ಎನ್‌ಡಿಎ ಮಿತ್ರ ಪಕ್ಷಗಳುಇದುಅಭಿವೃದ್ಧಿಪರ ಬಜೆಟ್‌ ಎಂದುಬಣ್ಣಿಸಿವೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೇಂದ್ರ ಬಜೆಟ್‌ ಅನ್ನು ಟೀಕೆ ಮಾಡಿದ್ದಾರೆ. ಮೋದಿ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿನಿಮ್ಮ ಅಹಂಕಾರಮತ್ತುಅಸಮರ್ಥ ಆಡಳಿತ, ರೈತರ ಜೀವನವನ್ನು ನಾಶಮಾಡಿದೆ. ದಿನಕ್ಕೆ ₹ 17 ನೀಡುವಮೂಲಕ ದೇಶದ ಜನರು ಮತ್ತು ರೈತರಿಗೆ ಅವಮಾನ ಮಾಡಿದ್ದೀರಿ ಎಂದುರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರ ಬಜೆಟ್‌ ಕುರಿತಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಕಾಂಗ್ರೆಸ್‌ ಯೋಜನೆಗಳನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಮಧ್ಯಂತರ ಬಜೆಟ್‌ ಅಲ್ಲ, ಚುನಾವಣಾ ಪ್ರಚಾರದ ಬಜೆಟ್‌ ಆಗಿದೆ. ಈ ದೇಶದ ಸಂಪನ್ಮೂಲಗಳು ಬಡ ಜನರ ಹಕ್ಕು ಎಂಬ ಕಾಂಗ್ರೆಸ್‌ ನೀತಿಯನ್ನು ಬಿಜೆಪಿಯವರು ನಕಲು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಇದು ಕೂಡ ಮೋದಿ ಅವರ ಜುಮ್ಲಾ ಬಜೆಟ್‌ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟೀಕಿಸಿದ್ದಾರೆ. ನಾವು ವಾರ್ಷಿಕ 325 ಕೋಟಿ ರೂಪಾಯಿ ತೆರಿಗೆ ನೀಡುತ್ತೇವೆ ಆದರೆ ನಮಗೆ ಏನು ಕೊಟ್ಟಿಲ್ಲ, ಇದೊಂದು ನಿರಾಶದಾಯಕ ಬಜೆಟ್‌ ಎಂದು ಅವರುಟೀಕಿಸಿದ್ದಾರೆ.

ಇದು ಕೂಡ ಮೋದಿಯವರ ಜುಮ್ಲಾ ಬಜೆಟ್‌ ಆಗಿದೆ. ಇದನ್ನು ನಂಬುವುದಕ್ಕೂ ಮುನ್ನ ಬಜೆಟ್‌ ಪ್ರತಿಯನ್ನುಎಚ್ಚರಿಕೆಯಿಂದ ಓದಿಕೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿದೆ.

ಇದು ನವ ಭಾರತದ ಬಜೆಟ್‌ ಆಗಿದೆ. ಇದು ಎಲ್ಲಾ ಭಾರತೀಯರನ್ನು ಒಳಗೊಂಡಿರುವ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಇದು ಜನ ಸಾಮನ್ಯರ ಬಜೆಟ್‌ ಆಗಿದೆ. ಬಡವರು, ರೈತರು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಪರವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್‌ ಟ್ವೀಟ್‌ ಮಾಡಿದ್ದಾರೆ.

A Pro-worker, pro-poor, pro-farmer, pro-villager & truly pro-common man budget !
Thank you Hon PM @narendramodi ji & Union Minister @PiyushGoyal ji for series of historic decisions in your continuous efforts for a better living to last person of the society! #BudgetForNewIndia pic.twitter.com/q2Uy0Fd7QQ

— Devendra Fadnavis (@Dev_Fadnavis) February 1, 2019

ರೈತರು, ಕೂಲಿಕಾರ್ಮಿಕರು ಮತ್ತು ಮಧ್ಯಮ ವರ್ಗಗಳ ಜನರ ಪರವಾಗಿರುವ ಬಜೆಟ್‌ ಇದು. ರೈತರಿಗೆ ಆದ್ಯತೆ ನೀಡಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಘೋಷಣೆ ಮಾಡಲಾಗಿದೆ. ಇದು ಸಾಲ ಪಡೆಯದ ರೈತರಿಗೂ ಅನುಕೂಲವಾಗಲಿದೆ ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಇದೊಂದು ಐತಿಹಾಸಿಕ ಬಜೆಟ್‌. ಸಮಾಜದ ಎಲ್ಲಾ ವಲಯಗಳಿಗೂ ಈ ಬಜೆಟ್‌ನಿಂದ ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.