ADVERTISEMENT

ಕೋವಿಡ್ ಚಿಕಿತ್ಸೆಗೆ ಇನ್ನು ಪ್ಲಾಸ್ಮಾ ಥೆರಪಿ ಬಳಕೆಯಿಲ್ಲ: ಸರ್ಕಾರ ಹೊಸ ಮಾರ್ಗಸೂಚಿ

ಪಿಟಿಐ
Published 18 ಮೇ 2021, 1:12 IST
Last Updated 18 ಮೇ 2021, 1:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್ 19 ಚಿಕಿತ್ಸೆಗೆ ಸಂಬಂಧಿಸಿ ನಿಯಮಾವಳಿಗಳನ್ನು ಸರ್ಕಾರ ಸೋಮವಾರ ಪರಿಷ್ಕರಿಸಿದ್ದು, ಪ್ರಸ್ತುತ ಬಳಕೆಯಲ್ಲಿದ್ದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ.

ಪ್ಲಾಸ್ಮಾ ಚಿಕಿತ್ಸೆ ವಿಧಾನದಿಂದ ಕೋವಿಡ್ ರೋಗ ಗುಣಪಡಿಸುವುದರಲ್ಲಿ ಹೆಚ್ಚಿನ ಪ್ರಯೋಜನವಿಲ್ಲದೇ ಇರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕೋವಿಡ್ 19 ಐಸಿಎಂಆರ್ ನ್ಯಾಶನಲ್ ಟಾಸ್ಕ್ ಫೋರ್ಸ್ ಕಳೆದ ವಾರ ಸಭೆ ಸೇರಿ ಚರ್ಚಿಸಿದ್ದು, ಈ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ.

ADVERTISEMENT

ಹಲವು ಪ್ರಕರಣಗಳಲ್ಲಿ ಪ್ಲಾಸ್ಮಾ ಬಳಕೆಯಿಂದ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೆ ಸಮರ್ಪಕ ವಿಧಾನದಲ್ಲಿ ಬಳಕೆಯಾಗದ ಕಾರಣ ಅದನ್ನು ಕೈಬಿಟ್ಟಿದ್ದು, ಪರಿಷ್ಕೃತ ನಿಯಮಾವಳಿಯನ್ನು ಸರ್ಕಾರ ಪ್ರಕಟಿಸಿದೆ.

‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)’ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ವಯಸ್ಕ ಕೋವಿಡ್ 19 ರೋಗಿಗಳ ಚಿಕಿತ್ಸೆ ವಿಧಾನದ ಮಾರ್ಗಸೂಚಿ ಪರಿಷ್ಕರಿಸಲಾಗಿದೆ, ದೇಶದಲ್ಲಿ ಇನ್ನು ಪ್ಲಾಸ್ಮಾ ಚಿಕಿತ್ಸೆ ಬಳಸುವಂತಿಲ್ಲ ಎಂದಿದ್ದಾರೆ.

ಈ ಮೊದಲು ಸರ್ಕಾರ ಹೊರಡಿಸಿದ್ದ ನಿಯಮಾವಳಿಯಲ್ಲಿ ಕೋವಿಡ್ 19 ಚಿಕಿತ್ಸೆಯಲ್ಲಿ ದಾನಿಗಳ ನೆರವಿನಿಂದ ಪಡೆದ ಪ್ಲಾಸ್ಮಾವನ್ನು ವೈದ್ಯರು ಬಳಸಿಕೊಳ್ಳಲು ಅವಕಾಶವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.