ಮುಂಬೈ:ಬುಧವಾರಮುಂಬೈಗೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆಯಿಂದಾಗಿಮುಂಬೈಯಿಂದ ಹೊರಡುವ ವಿಶೇಷ ರೈಲುಗಳ ಸಮಯ ಬದಲಾವಣೆ ಮಾಡಲಾಗಿದೆ.
ಸೆಂಟ್ರಲ್ ರೈಲ್ವೆ ಮಾಹಿತಿ ಪ್ರಕಾರ ಸಮಯ ಬದಲಾಗಿರುವ ರೈಲುಗಳ ವೇಳಾಪಟ್ಟಿ ಇಂತಿದೆ.
*02542 ಎಲ್‌ಟಿಟಿ - ಗೋರಖ್‌ಪುರ್ ವಿಶೇಷ ರೈಲು 11.10ರ ಬದಲು ರಾತ್ರಿ 8 ಗಂಟೆಗೆ ಹೊರಡಲಿದೆ
*06345 ಎಲ್‌ಟಿಟಿ- ತಿರುವನಂತಪುರಂ ವಿಶೇಷ ರೈಲು 11.40ಕ್ಕೆ ಹೊರಡುವ ಬದಲು ಸಂಜೆ 6 ಗಂಟೆಗೆ ಹೊರಡಲಿದೆ.
*01061 ಎಲ್‌ಟಿಟಿ- ದರ್ಭಂಗ ವಿಶೇಷ ರೈಲು ಮಧ್ಯಾಹ್ನ 12.15ಕ್ಕೆ ಹೊರಡುವ ಬದಲು ರಾತ್ರಿ 8.30ಕ್ಕೆ ಹೊರಡಲಿದೆ
*01071 ಎಲ್‌ಟಿಟಿ- ವಾರಣಾಸಿ ವಿಶೇಷ ರೈಲು ಮಧ್ಯಾಹ್ನ 12.40ಕ್ಕೆ ಹೊರಡುವ ಬದಲು ರಾತ್ರಿ 9 ಗಂಟೆಗೆ ಹೊರಡಲಿದೆ.
*01019 ಸಿಎಸ್‌ಎಂಟಿ- ಭುವನೇಶ್ವರ್ ವಿಶೇಷ ರೈಲು ಸಂಜೆ 3.05ಕ್ಕೆ ಹೊರಡುವ ಬದಲು ರಾತ್ರಿ 8 ಗಂಟೆಗೆ ಹೊರಡಲಿದೆ.
ಅದೇ ರೀತಿ ಮುಂಬೈಗೆ ಬಂದು ತಲುಪುವ ರೈಲುಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಲಾಗಿದೆ.
*03201 ಪಾಟ್ನಾ- ಎಲ್‌ಟಿಟಿ ವಿಶೇಷ ರೈಲು 11.30ಕ್ಕೆ ತಲುಪುವ ಬದಲು ವಿಳಂಬವಾಗಿ ತಲುಪಲಿದೆ
*01094 ವಾರಣಾಸಿ-ಸಿಎಸ್‌ಎಂಟಿ ವಿಶೇಷ ರೈಲು 2,15ಕ್ಕೆ ತಲುಪುವ ಬದಲು ವಿಳಂಬವಾಗಲಿದೆ
*06436 ತಿರುವನಂತಪುರಂ ಎಲ್‌ಟಿಟಿ ವಿಶೇಷ ರೈಲು 4.40ಕ್ಕೆ ತಲುಪುವ ಬದಲು ವಿಳಂಬವಾಗಲಿದೆ. ಈ ರೈಲು ಪುಣೆ ಮೂಲಕ ಮಾರ್ಗ ಬದಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.