ADVERTISEMENT

ಕೇಂದ್ರೀಯ ವಿ.ವಿ: ಕನ್ನಡ ಸೇರಿ 13 ಭಾಷೆಗಳಲ್ಲಿ ‍ಪ್ರವೇಶ ಪರೀಕ್ಷೆ

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 20:14 IST
Last Updated 22 ಮಾರ್ಚ್ 2022, 20:14 IST

ನವದೆಹಲಿ: ಕೇಂದ್ರೀಯ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ ಗಳಿಗೆ ಪ್ರವೇಶ ಕಲ್ಪಿಸಲು ನಡೆಯುವ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ) ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ. ಏಪ್ರಿಲ್‌ ಮೊದಲ ವಾರ ಪರೀಕ್ಷಾ ಪ್ರಕ್ರಿಯೆ ಆರಂಭವಾಗಲಿದೆ.

‘ಒಂದು ರಾಷ್ಟ್ರ, ಒಂದು ಪ್ರವೇಶ ಪರೀಕ್ಷೆ’ ಚಿಂತನೆಯಡಿ ಈ ಪರೀಕ್ಷೆಯು ನಡೆಯಲಿದೆ. ಪ್ರವೇಶ ಪರೀಕ್ಷೆಯು ಸಾಮಾನ್ಯ ಜ್ಞಾನ ಮತ್ತು ವಿಷಯ ಕೇಂದ್ರೀತ ಪರೀಕ್ಷೆಗಳ ಜೊತೆಗೆ 1ಎ ಮತ್ತು 1ಬಿ ಎಂಬ ಎರಡು ವರ್ಗದಲ್ಲಿ ನಡೆಯಲಿದೆ.

1ಎ ವರ್ಗದ ಪರೀಕ್ಷೆ ಕಡ್ಡಾಯ ವಾಗಿದ್ದು, ಗುರುತಿಸಲಾದ 13 ಭಾಷೆಗಳಲ್ಲಿ ಯಾವುದೇ ಒಂದು ಭಾಷೆ ಯಲ್ಲಿ ತೆಗೆದುಕೊಳ್ಳಬಹುದಾಗಿದೆ. 1ಬಿ ಐಚ್ಛಿಕವಾಗಿದ್ದು. ಕೊಂಕಣಿ, ಸಿಂಧಿ ಸೇರಿದಂತೆ ಹೆಚ್ಚುವರಿಯಾಗಿ ಗುರುತಿಸಲಾದ ಭಾಷೆಗಳಲ್ಲಿ ತೆಗೆದು ಕೊಳ್ಳಬಹುದಾಗಿದೆ.

ADVERTISEMENT

ವಿಷಯ ಆಧಾರಿತ ವಿಭಾಗದಲ್ಲಿ ರಾಸಾಯನ ವಿಜ್ಞಾನ, ಭೌತವಿಜ್ಞಾನ, ಲೆಕ್ಕಶಾಸ್ತ್ರ, ಸಮಾಜವಿಜ್ಞಾನ ಸೇರಿದಂತೆ 27 ವಿಷಯಗಳಿವೆ. ಅಭ್ಯರ್ಥಿಗಳು ಇವುಗಳಲ್ಲಿ 6 ವಿಷಯ ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯ ಜ್ಞಾನ ಪರೀಕ್ಷೆಯು ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ, ಗ್ರಹಿಕೆ ಸಾಮರ್ಥ್ಯ, ಬುದ್ಧಿಮತ್ತೆಗೆ ಸಂಬಂಧಿಸಿದ್ದಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸಿಯುಇಟಿ ಅನ್ನು ನಡೆಸಲಿದ್ದು, ಪರೀಕ್ಷೆಯ ಅವಧಿಯು ಮೂರುವರೆ ಗಂಟೆ ಆಗಿದೆ. ಪರೀಕ್ಷೆಯು ಜುಲೈ ತಿಂಗಳಲ್ಲಿ ನಡೆಯಲಿದೆ ಎಂದು ವಿಶ್ವ ವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.