ADVERTISEMENT

Delhi Air Pollution: ಕಚೇರಿಗಳ ಕಾರ್ಯ ನಿರ್ವಹಣೆಗೆ ಭಿನ್ನ ವೇಳಾಪಟ್ಟಿ ಪ್ರಕಟ

ಪಿಟಿಐ
Published 21 ನವೆಂಬರ್ 2024, 15:47 IST
Last Updated 21 ನವೆಂಬರ್ 2024, 15:47 IST
<div class="paragraphs"><p>ದೆಹಲಿ ಮಾಲಿನ್ಯ</p></div>

ದೆಹಲಿ ಮಾಲಿನ್ಯ

   

– ರಾಯಿಟರ್ಸ್ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯುಮಾಲಿನ್ಯದ ಕಾರಣ ಕೇಂದ್ರ ಸಿಬ್ಬಂದಿ ಸಚಿವಾಲಯವು ಸರ್ಕಾರಿ ಸಿಬ್ಬಂದಿಗೆ ಭಿನ್ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. 

ADVERTISEMENT

ಬದಲಾದ ಸಮಯಕ್ಕೆ ಪೂರಕವಾಗಿ ಸಿಬ್ಬಂದಿ ಸಂಚಾರಕ್ಕೆ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನೌಕರರಿಗೆ ಸಲಹೆ ಮಾಡಿದೆ.

ಕಚೇರಿಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆ ಹಾಗೂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30ರವರೆಗಿನ ಅವಧಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಆದೇಶ ತಿಳಿಸಿದೆ. 

ವಾಹನಗಳಿಂದಾಗುವ ಮಾಲಿನ್ಯ ತಗ್ಗಿಸಲು, ವೈಯಕ್ತಿಕ ವಾಹನ ಬಳಸುತ್ತಿರುವ ಸಿಬ್ಬಂದಿ, ಅಧಿಕಾರಿಗಳಿಗೆ ಸಾರ್ವಜನಿಕ ವಾಹನ ಬಳಸಲು ಉತ್ತೇಜಿಸಬೇಕು ಎಂದು ತಿಳಿಸಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟದ ಕಳೆದ ದಿನಗಳಿಂದ ಗಂಭೀರ ಸ್ವರೂಪ ಮಟ್ಟದಲ್ಲಿದೆ. ಗುರುವಾರ ಬೆಳಿಗ್ಗೆ 9 ಗಂಟೆಗೆ ದಾಖಲಾದಂತೆ ವಾಯು ಗುಣಮಟ್ಟ ಸೂಚ್ಯಂಕವು 376 ಇದ್ದು, ಇದು, ಅತ್ಯಂತ ಕ‌‌ಳಪೆ ಎಂಬುದನ್ನು ಸೂಚಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.