ADVERTISEMENT

ವಿಪತ್ತು ಪರಿಹಾರ ನಿಧಿ: ಕರ್ನಾಟಕಕ್ಕೆ ₹ 941 ಕೋಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:44 IST
Last Updated 13 ಮಾರ್ಚ್ 2023, 23:44 IST
ಕೃಷ್ಣಾ ನದಿಯ ಪ್ರವಾಹದಿಂದ ಜಲಾವೃತಗೊಂಡಿದ್ದ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮ –ಸಂಗ್ರಹ ಚಿತ್ರ
ಕೃಷ್ಣಾ ನದಿಯ ಪ್ರವಾಹದಿಂದ ಜಲಾವೃತಗೊಂಡಿದ್ದ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮ –ಸಂಗ್ರಹ ಚಿತ್ರ   

ನವದೆಹಲಿ: 2022ರ ಅವಧಿಯಲ್ಲಿ ಉಂಟಾದ ಪ್ರವಾಹ, ಭೂಕುಸಿತದಿಂದ ಹಾನಿಗೊಳಗಾಗಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ₹941.04 ಕೋಟಿ ಮಂಜೂರು ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಐದು ರಾಜ್ಯಗಳಿಗೆ ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದೆ. ಅಸ್ಸಾಂಗೆ ₹520.46 ಕೋಟಿ, ಹಿಮಾಚಲ ಪ್ರದೇಶಕ್ಕೆ ₹239.31 ಕೋಟಿ, ಮೇಘಾಲಯಕ್ಕೆ ₹47.32 ಕೋಟಿ ಹಾಗೂ ನಾಗಾಲ್ಯಾಂಡ್‌ಗೆ ₹68.02 ಕೋಟಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT