ADVERTISEMENT

ಜೋಶಿಮಠ: ₹1,658 ಕೋಟಿ ಮೊತ್ತದ ಮರುನಿರ್ಮಾಣ ಯೋಜನೆ

ಪಿಟಿಐ
Published 30 ನವೆಂಬರ್ 2023, 14:41 IST
Last Updated 30 ನವೆಂಬರ್ 2023, 14:41 IST
<div class="paragraphs"><p>ಜೋಶಿಮಠ</p></div>

ಜೋಶಿಮಠ

   

ನವದೆಹಲಿ: ಈ ವರ್ಷದ ಆರಂಭದಲ್ಲಿ ಭೂಕುಸಿತದಿಂದ ನಲುಗಿದ್ದ ಜೋಶಿಮಠದಲ್ಲಿ ₹ 1,658 ಕೋಟಿ ಮೊತ್ತದ ಮರುನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರವು ಗುರುವಾರ ಒಪ್ಪಿಗೆ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಮರುನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ₹ 1,079.96 ಕೋಟಿ ಒದಗಿಸಲಿದೆ. ಉತ್ತರಾಖಂಡ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್‌) ₹ 126.41 ಕೋಟಿ ಹಾಗೂ ರಾಜ್ಯ ಬಜೆಟ್‌ನಿಂದ ₹ 451.80 ಕೋಟಿ ನೀಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.