ಚೆನ್ನೈ: ದೇಶದಲ್ಲಿ ‘ಓವರ್ ದಿ ಟಾಪ್ ಪ್ಲಾಟ್‌ಫಾರ್ಮ್’ಗಳು (ಒಟಿಟಿ ವೇದಿಕೆ) ಸ್ವಯಂ ನಿಯಂತ್ರಣ ಅಭ್ಯಾಸಗಳಿಗೆ ಬದ್ಧವಾಗಿಲ್ಲ ಎಂಬ ದೂರುಗಳು ಬಂದಿರುವ ಕಾರಣ, ಕೇಂದ್ರ ಸರ್ಕಾರ ಹೊಸ ಪ್ರಸಾರ ನೀತಿಯನ್ನು ರೂಪಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ಬುಧವಾರ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಫ್‌ಎಂ ರೇಡಿಯೊ ಚಾನೆಲ್‌ಗಳು ಸುದ್ದಿ ಬುಲಿಟಿನ್‌ಗಳನ್ನು ಪ್ರಸಾರ ಮಾಡುವುದರ ಕುರಿತು, ಸಂಬಂಧಿಸಿದವರ ಜತೆ ವಿಸ್ತೃತ ಚರ್ಚೆ ನಡೆಸಲಾಗುತ್ತಿದೆ ಎಂದರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.