ADVERTISEMENT

ಪ್ರಕೃತಿ ವಿಕೋಪದ ಎಚ್ಚರಿಕೆಯನ್ನು ಕೇರಳಕ್ಕೆ ಜುಲೈ 23ರಂದೇ ನೀಡಲಾಗಿತ್ತು: ಶಾ

ಪಿಟಿಐ
Published 31 ಜುಲೈ 2024, 10:18 IST
Last Updated 31 ಜುಲೈ 2024, 10:18 IST
<div class="paragraphs"><p>ಅಮಿತ್‌ ಶಾ</p></div>

ಅಮಿತ್‌ ಶಾ

   

ನವದೆಹಲಿ: ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಕೇರಳ ಸರ್ಕಾರಕ್ಕೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಜುಲೈ 23ಕ್ಕೆ ಎನ್‌ಡಿಆರ್‌ಎಫ್‌ ತಂಡಗಳು ಕೇರಳಕ್ಕೆ ತೆರಳಿದ್ದವು ಎಂದು ಗೃಹ ಸಚಿವ ಅಮಿತ್‌ ಶಾ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.

‘ಮುಂಚಿತವಾಗಿ ನೀಡಿದ್ದ ಎಚ್ಚರಿಕೆಗೆ ಕೇರಳ ಸರ್ಕಾರ ಕಿವಿಗೊಡಲಿಲ್ಲ, ಕೊನೆ ಪಕ್ಷ ಎನ್‌ಡಿಆರ್‌ಎಫ್‌ ತಂಡಗಳು ರಾಜ್ಯಕ್ಕೆ ಬಂದಿರುವುದು ಗೊತ್ತಾದರೂ ಎಚ್ಚೆತ್ತುಕೊಳ್ಳಲಿಲ್ಲ. ಈಗ ಅನಾಹುತ ಆಗಿ ಹೋಗಿದೆ. ನರೇಂದ್ರ ಮೋದಿ ಸರ್ಕಾರ ಕೇರಳ ಸರ್ಕಾರದೊಂದಿಗೆ ಬಂಡೆಯಂತೆ ಗಟ್ಟಿಯಾಗಿ ನಿಲ್ಲಲಿದೆ. ಕೇಂದ್ರದಿಂದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಕೇಂದ್ರ ಸರ್ಕಾರದ ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ದುರಂತದ ಪ್ರತಿಕ್ರಿಯೆ ಬಗ್ಗೆ ವಿಪಕ್ಷಗಳು ಟೀಕಿಸಿದ ಹಿನ್ನೆಲೆ, ಶಾ ಉತ್ತರಿಸಿದರು.

‘ಜುಲೈ30ರಂದು ಪ್ರಾಕೃತಿಕ ವಿಕೋಪದಿಂದ ಅನಾಹುತ ಸಂಭವಿಸುವ ಸಾಧ್ಯತೆ ಬಗ್ಗೆ ಏಳು ದಿನಗಳ ಹಿಂದೆಯೇ ತಿಳಿಸಲಾಗಿತ್ತು. ಅಲ್ಲದೆ ಜುಲೈ 24ರಂದು ಕೂಡ ಮತ್ತೊಮ್ಮೆ ಎಚ್ಚರಿಸಲಾಗಿತ್ತು. ಜುಲೈ 23ರಂದು 9 ಎನ್‌ಡಿಆರ್‌ಎಫ್‌ ತಂಡಗಳನ್ನು ಕಳುಹಿಸಲಾಗಿತ್ತು. ಎನ್‌ಡಿಆರ್‌ಎಫ್‌ ತಂಡಗಳನ್ನು ನೋಡಿದ ಮೇಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಸಾವಿನ ಪ್ರಮಾಣವನ್ನು ತಗ್ಗಿಸಬಹುದಿತ್ತು. ನಿನ್ನೆ (ಜುಲೈ30) ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಮೂರು ಎನ್‌ಡಿಆರ್‌ಎಫ್‌ ತಂಡಗಳನ್ನು ಕಳುಹಿಸಲಾಗಿದೆ’ ಎಂದು ಶಾ ತಿಳಿಸಿದರು.

ಇಷ್ಟೆ ಅಲ್ಲದೆ, ಪ್ರಕೃತಿ ವಿಕೋಪದಿಂದಾಗುವ ಹಾನಿಯ ಪ್ರಮಾಣವನ್ನು ತಪ್ಪಿಸಲು ಒಡಿಶಾ, ಗುಜರಾತ್‌ ರಾಜ್ಯಗಳಿಗೂ ಮುನ್ನೆಚ್ಚರಿಕೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.