ADVERTISEMENT

ಮಾನವನ ಜೀವಂತ ಅಂಗಾಂಗ ಸಾಗಣೆ: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ಪಿಟಿಐ
Published 4 ಆಗಸ್ಟ್ 2024, 2:31 IST
Last Updated 4 ಆಗಸ್ಟ್ 2024, 2:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವಾಲಯವು  ವಾಯು, ರಸ್ತೆ,‌ ರೈಲ್ವೆ, ಜಲಮಾರ್ಗದ ಮೂಲಕ ಮಾನವನ ಜೀವಂತ ಅಂಗಾಂಗಳನ್ನು ಸಾಗಿಸಲು ಮಾರ್ಗಸೂಚಿ ಪ್ರಕಟಿಸಿದೆ.

ದೇಶದಾದ್ಯಂತ ಅಂಗಾಂಗ ಕಸಿ ಮಾಡುವವರಿಗೆ ಇದು ಮಾರ್ಗಸೂಚಿಯಾಗಿರಲಿದೆ. 

ADVERTISEMENT
  • ಅಂಗಾಂಗ ದಾನಿ ಮತ್ತು ಅಂಗ ಸ್ವೀಕರಿಸುವವರು ಒಂದೇ ನಗರದೊಳಗೆ ಅಥವಾ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಇರುವಾಗ ಆಸ್ಪತ್ರೆಗಳ ನಡುವೆ ಜೀವಂತ ಅಂಗವನ್ನು ಸಾಗಿಸಬೇಕಾಗುತ್ತದೆ.

  • ವಿಮಾನದ ಮೂಲಕ ಅಂಗಾಂಗ ಸಾಗಿಸುವಾಗ ಆದ್ಯತೆಯ ಮೇರೆಗೆ ಟೇಕ್‌ಆಪ್‌ ಮತ್ತು ಲ್ಯಾಂಡಿಂಗ್‌ ಮಾಡಬೇಕು. ಅಲ್ಲದೆ ತಡವಾಗಿ ಚೆಕ್‌ ಇನ್‌ ಮಾಡಿದರೆ ಅದನ್ನು ಅನುಮತಿಸಬೇಕು . 

  • ಅಂಗಾಂಗ ಸಾಗಣೆ ವೇಳೆ ವಿಮಾನಗಳಲ್ಲಿ ಮುಂದಿನ ಸೀಟುಗಳಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಉಳಿದ ಪ್ರಯಾಣಿಕರಿಗೆ ಜೀವಂತ ಅಂಗಾಂಗ ಸಾಗಿಸುತ್ತಿರುವ ಬಗ್ಗೆ ಘೋಷಣೆಯ ಮೂಲಕ ತಿಳಿಯಪಡಿಸಬಹುದು.

  • ವಿಮಾನ ನಿಲ್ದಾಣ ಅಥವಾ ರಸ್ತೆ ಯಾವುದೇ ಮಾರ್ಗವಾಗಿರಲಿ ಹಸಿರು ಕಾರಿಡಾರ್‌ ನಿರ್ಮಿಸುವ ಮೂಲಕ ದಾರಿಯಲ್ಲಿನ ಅಡಚಣೆಯನ್ನು ಮುಕ್ತಿಗೊಳಿಸಿ ಅಂಗಾಂಗ ಹೊತ್ತ ವಾಹನದ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು.

  • ಮೆಟ್ರೊದಲ್ಲಿ ಅಂಗಾಂಗ ಸಾಗಿಸುವ ವೇಳೆ ಬೆಂಗಾವಲು ನೀಡುವುದರ ಜೊತೆಗೆ, ಸಮಯದ ಉಳಿತಾಯಕ್ಕಾಗಿ ಭದ್ರತಾ ತಪಾಸಣೆಯನ್ನು ಕೈಬಿಡಬಹುದು.

  • ಅಂಗಾಂಗ ಶೇಖರಿಸಿಟ್ಟ ಬಾಕ್ಸ್‌ಅನ್ನು ಸಾಗಣೆಯ ವೇಳೆ, ಮೇಲ್ಮೈಗೆ 90 ಡಿಗ್ರಿಗಳಷ್ಟು ನೇರವಾಗಿರಬೇಕು, ಜತೆಗೆ ಬಾಕ್ಸ್‌ ಮೇಲೆ ಲೇಬಲ್‌ ಅನ್ನು ಅಂಟಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಂಗಾಂಗ ಸಾಗಣೆಯನ್ನು ಸುಗಮಗೊಳಿಸುವ ಮೂಲಕ, ಅಮೂಲ್ಯವಾದ ಅಂಗಾಂಗಳ ಬಳಕೆಯನ್ನು ಗರಿಷ್ಠಗೊಳಿಸಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಭರವಸೆ ನೀಡುವ ಗುರಿಯಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.