ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ತನ್ನ ನೌಕರರು, ಪಿಂಚಣಿದಾರರಿಗೆ ಶೇ 4ರಷ್ಟು ತುಟ್ಟಿಭತ್ಯೆ ಏರಿಸುವ ಸಾಧ್ಯತೆಗಳಿದ್ದು, ತುಟ್ಟಿಭತ್ಯೆ ಪ್ರಮಾಣವು ಈಗಿನ ಶೇ 38ರಿಂದ ಒಟ್ಟು ಶೇ 42ಕ್ಕೆ ಏರಿಕೆಯಾಗುವ ಸಂಭವವಿದೆ.
ಕಾರ್ಮಿಕ ಸಚಿವಾಲಯದ ಭಾಗವಾದ ಕಾರ್ಮಿಕ ಮಂಡಳಿಯು ಪ್ರಕಟಿಸುವ ಕೈಗಾರಿಕಾ ಕಾರ್ಮಿಕರ ಗ್ರಾಹಕರ ದರ ಸೂಚ್ಯಂಕವನ್ನು (ಸಿಪಿಐ–ಐಡಬ್ಲ್ಯು) ಆಧರಿಸಿ ತುಟ್ಟಿಭತ್ಯೆ ಪ್ರಮಾಣವನ್ನು ಪರಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ.
‘ಜ.1, 2023ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಪ್ರಮಾಣ ಏರಿಕೆ ಆಗ
ಬಹುದು’ ಎಂದು ಅಖಿಲ ಭಾರತ ರೈಲ್ವೆಮೆನ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.