ನವದೆಹಲಿ: ಸಂಸದರು ಖಾಸಗಿಯಾಗಿ ವಿದೇಶಗಳಿಗೆ ತೆರಳಿದ ಸಂದರ್ಭಗಳಲ್ಲಿ, ಅಲ್ಲಿನ ಆತಿಥ್ಯ ಸ್ವೀಕರಿಸುವಾಗ ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕು, ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ರಾಜ್ಯಸಭಾ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.
ಸಂಸದರು ನೀತಿಸಂಹಿತೆ ಪಾಲಿಸಬೇಕು, ಸಂಸದರಾಗಿ ತಾವು ನಿರ್ವಹಿಸಬೇಕಿರುವ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿ ಉಂಟುಮಾಡಬಹುದಾದ ಉಡುಗೊರೆಗಳನ್ನು ಪಡೆಯಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.
ವಿದೇಶಗಳಿಂದ ಬರುವ ಆಹ್ವಾನವನ್ನು ಸಂಸದರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರಬೇಕು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.