ಚಂಡೀಗಢ: ಮಿದುಳು ನಿಷ್ಕ್ರಿಯಗೊಂಡಿದ್ದ ನಿವೃತ್ತ ಸುಬೇದಾರ್ ಅವರ ಅಂಗಾಂಗ ದಾನಕ್ಕೆ ಅವರ ಕುಟುಂಬಸ್ಥರು ನಿರ್ಧರಿಸಿದ ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿದ್ದ ಮೂವರು ಸೈನಿಕರು ಮರುಜೀವ ಪಡೆದಿದ್ದಾರೆ.
ಸುಬೇದಾರ್ ಅವರು ಮಂಗಳವಾರ ನಿಧನರಾದ ನಂತರ ಅವರ ಅಂಗಾಂಗಗಳನ್ನು ಭಾರತೀಯ ವಾಯುಪಡೆಯು ದೆಹಲಿಯ ಸೇನಾ ಆಸ್ಪತ್ರೆಗೆ ಸಾಗಿಸಿತು.
ಸುಬೇದಾರ್ ಅವರು 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.
‘ಆಘಾತಕ್ಕೆ ಒಳಗಾಗಿ ಸುಬೇದಾರ್ ಅವರ ಮಿದುಳು ನಿಷ್ಕ್ರಿಯವಾಗಿತ್ತು. ಅವರ ಕುಟುಂಬಸ್ಥರು ಮೂತ್ರಪಿಂಡ, ಕಾರ್ನಿಯಾ ಮತ್ತು ಯಕೃತ್ ದಾನ ಮಾಡಲು ನಿರ್ಧರಿಸಿದರು. ಇದರಿಂದ ಮೂವರು ಸೈನಿಕರಿಗೆ ಮರುಜೀವ ಬಂದಂತಾಗಿದೆ’ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಅಂಗಾಂಗಗಳನ್ನು ದೆಹಲಿಯ ಸೇನಾ ಆಸ್ಪತ್ರೆಗೆ ಒಂದು ಗಂಟೆಯ ಒಳಗಾಗಿ ಸಾಗಿಸಲಾಯಿತು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.