ಮಚಲಿಪಟ್ಟಣ: ವೈಎಸ್‌ಆರ್‌ಸಿಪಿ ಪಕ್ಷ ಆಂಧ್ರ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಇಲ್ಲಿನ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಎಸ್‌ಆರ್‌ಸಿಪಿ ಸರ್ಕಾರ ರಾಜ್ಯದ ಎಲ್ಲಾ ವರ್ಗಗಳನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ಅವರ ಆರೋಪ ಮಾಡಿದರು.
ಮಚಲಿಪಟ್ಟಣ ಸೇರಿದಂತೆ ಕೃಷ್ಣಾ ಜಿಲ್ಲೆಯಲ್ಲಿ ಅವರು ಮೂರು ದಿನಗಳ ಕಾಲ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಆಂಧ್ರಪ್ರದೇಶದ ಆರ್ಥಿಕತೆಯನ್ನು ದಿವಾಳಿ ಪರಿಸ್ಥಿತಿಗೆ ತಳ್ಳುವ ಮೂಲಕ, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನು ದುಸ್ಥಿತಿಗೆ ತಳ್ಳಿದ್ದಾರೆ ಎಂದು ಜಗನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನೀವು ಮರಳು ಖರೀದಿಸಲು ಸಮರ್ಥರಾಗಿದ್ದೀರಾ ಎಂದು ನಾನು ನಿಮ್ಮನ್ನು (ಜನರನ್ನು) ಕೇಳಲು ಬಯಸುತ್ತೇನೆ. ಮರಳು ಎಲ್ಲಿಗೆ ಹೋಗುತ್ತಿದೆ? ಮರಳು ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಅದರಿಂದ ಬರುವ ಹಣ ಎಲ್ಲಿಗೆ ಹೋಗುತ್ತಿದೆ? ಆ ಹಣ ತಾಡೆಪಲ್ಲಿ ಅರಮನೆಗೆ ಹೋಗುತ್ತಿಲ್ಲವೇ? ಎಂದು ತಾಡೆಪಲ್ಲಿ ಪಟ್ಟಣದಲ್ಲಿರುವ ಮುಖ್ಯಮಂತ್ರಿ ಜಗನ್ ನಿವಾಸವನ್ನು ಪರೋಕ್ಷವಾಗಿ ಉಲ್ಲೇಖಿಸಿ ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.