ADVERTISEMENT

ಆಂಧ್ರ ಸಿಎಂ ಪಕ್ಕದಲ್ಲೇ ವೇಗವಾಗಿ ಹಾದು ಹೋದ ರೈಲು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 6:41 IST
Last Updated 6 ಸೆಪ್ಟೆಂಬರ್ 2024, 6:41 IST
ಎನ್. ಚಂದ್ರಬಾಬು ನಾಯ್ಡು
ಎನ್. ಚಂದ್ರಬಾಬು ನಾಯ್ಡು   

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ತಂಡ ತುಂಬಿ ಹರಿಯುತ್ತಿದ್ದ ಹೊಳೆಯನ್ನು ವೀಕ್ಷಿಸುತ್ತಿದ್ದಾಗ ಅವರ ಸಮೀಪದಲ್ಲೇ ರೈಲೊಂದು ವೇಗವಾಗಿ ಹಾದು ಹೋಗಿದೆ.

ವಿಜಯವಾಡದ ಮಧುರಾನಗರದ ಪ್ರವಾಹ ಪೀಡಿತ ಪ್ರದೇಶವನ್ನು ಪರಿಶೀಲಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ನಾಯ್ಡು ಹಾಗೂ ಭದ್ರತಾ ಸಿಬ್ಬಂದಿ ಅವರು ರೈಲ್ವೆ ಹಳಿ ಪಕ್ಕದಲೇ ವೀಕ್ಷಣೆ ಮಾಡುತ್ತಿದ್ದರು. ಅವರಿಗೂ ರೈಲ್ವೆ ಹಳಿಗೂ ಕೆಲವೇ ಮೀಟರ್‌ ದೂರ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ವೇಳೆ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮುಖ್ಯಮಂತ್ರಿಗಳ ಸಮೀಪದಲ್ಲಿ ಹಾದು ಹೋಗುವ ರೈಲಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ವಿಜಯವಾಡದಲ್ಲಿ ಭಾನುವಾರ ಒಂದೇ ದಿನ 37 ಸೆಂ.ಮೀ ಮಳೆ ಸುರಿದಿದೆ. ಬುಡಮೇರು ನದಿ ಉಕ್ಕಿ ಹರಿದಿದ್ದು ಭಾರಿ ಪ್ರವಾಹಕ್ಕೆ ಕಾರಣವಾಗಿದೆ. ಈ ಪ್ರವಾಹವು 2005ರ ವಿಜಯವಾಡ ಪ್ರವಾಹಕ್ಕಿಂತ ಭೀಕರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.