ADVERTISEMENT

ವಿಕ್ರಂ ಲ್ಯಾಂಡರ್ | ನಾಸಾಕ್ಕಿಂತ ಮೊದಲು ನಾವೇ ಪತ್ತೆ ಮಾಡಿದ್ದೆವು: ಇಸ್ರೊ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 6:06 IST
Last Updated 4 ಡಿಸೆಂಬರ್ 2019, 6:06 IST
ಕೆ.ಶಿವನ್
ಕೆ.ಶಿವನ್   

ನವದೆಹಲಿ: ‘ಸಂಪರ್ಕ ಕಡಿದುಕೊಂಡಿದ್ದ ಚಂದ್ರಯಾನ 2 ಗಗನನೌಕೆಯ ವಿಕ್ರಮ್‌ ಲ್ಯಾಂಡರ್‌ನಅವಶೇಷಗಳನ್ನು ನಾಸಾ ಪತ್ತೆ ಹಚ್ಚುವುದಕ್ಕೂ ಮುನ್ನವೇ ಇಸ್ರೊ ಆರ್ಬಿಟರ್‌ಪತ್ತೆ ಹಚ್ಚಿತ್ತು’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಸ್ಪಷ್ಟನೆ ನೀಡಿದ್ದಾರೆ.

‘ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ‘ದಿ ಲೂನಾರ್‌ ರಿಕಾನೈಸೆನ್ಸ್‌ ಆರ್ಬಿಟರ್‌’(ಎಲ್‌ಆರ್‌ಒ) ಉಪಗ್ರಹವು ಸೆರೆ ಹಿಡಿದಿರುವ ಚಿತ್ರದಲ್ಲಿ ವಿಕ್ರಮ್ಲ್ಯಾಂಡರ್ ಚಂದ್ರನ ಅಂಗಳದಲ್ಲಿರುವುದು ಕಾಣಿಸುತ್ತಿದೆ’ ಎಂದು ನಾಸಾ ಮಂಗಳವಾರ ಪ್ರಕಟಿಸಿತ್ತು.

ಸೆಪ್ಟೆಂಬರ್‌ 7ರಂದು ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆಯನ್ನುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ನಡೆಸಿತ್ತು. ಆದರೆ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ. ಎತ್ತರದಲ್ಲಿರಬೇಕಾದರೆ ವಿಕ್ರಮ್‌ ಲ್ಯಾಂಡರ್‌ ಜತೆಗಿನ ಸಂಪರ್ಕ ಕಡಿದುಕೊಂಡಿತ್ತು.

‘ಈ ಹಿಂದೆಯೇ ನಮ್ಮ ಆರ್ಬಿಟರ್‌ ವಿಕ್ರಮ್‌ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿತ್ತು. ಇದನ್ನು ನಮ್ಮ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದ್ದೆವು. ಅದನ್ನು ನೀವು ನೋಡಬಹುದು’ ಎಂದು ಹೇಳಿದ್ದಾರೆ.

‘ವಿಕ್ರಮ್‌ ಲ್ಯಾಂಡರ್‌ ಅನ್ನು ಚಂದ್ರಯಾನ 2 ಆರ್ಬಿಟರ್‌ ಪತ್ತೆ ಹಚ್ಚಿದೆ. ಆದರೆ, ಯಾವುದೇ ಸಂವಹನ ಇಲ್ಲಿಯವರೆ ಸಾಧ್ಯವಾಗಿಲ್ಲ. ಲ್ಯಾಂಡರ್‌ ಜೊತೆ ಸಂಪರ್ಕ ಹೊಂದುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದು ಸೆಪ್ಟೆಂಬರ್ 10ರಂದು ಇಸ್ರೊ ವೆಬ್‌ಸೈನ್‌ಲ್ಲಿ ಪ್ರಕಟಿಸಿತ್ತು.

ಭಾರತದ ಷಣ್ಮುಗ ಸುಬ್ರಮಣಿಯನ್ ಅವರು, ವಿಕ್ರಮ್ನ ನೌಕೆಯು ಚಂದ್ರನ ಮೇಲ್ಮೈನಲ್ಲಿ ಅಪ್ಪಳಿಸಿದ ಸ್ಥಳ ಮತ್ತು ಒಂದು ಅವಶೇಷವನ್ನುನಮ್ಮ ಚಿತ್ರಗಳನ್ನು ಬಳಸಿಕೊಂಡು ಪತ್ತೆ ಮಾಡಿದ್ದರು. ಅವರು ಪತ್ತೆ ಮಾಡಿದ್ದ ಜಾಗ ಮತ್ತು ಸುತ್ತಮುತ್ತಲಿನ ಜಾಗವನ್ನು ಮತ್ತೆ ಶೋಧಿಸಿದೆವು. ಆಗ ವಿಕ್ರಮ್ನ 24 ಅವಶೇಷಗಳು ಪತ್ತೆಯಾದವು’ ಎಂದು ನಾಸಾದಚಂದ್ರನ ಮೇಲ್ಮೈ ಅನ್ವೇಷಣೆ ಕಕ್ಷೆಗಾಮಿ ಕ್ಯಾಮೆರಾ(ಲೂನಾರ್ ರಿಕಾನಿಸನ್ಸ್‌ ಆರ್ಬಿಟರ್‌ ಕ್ಯಾಮೆರಾ–ಎಲ್‌ಆರ್‌ಒಸಿ) ತಂಡವು ಹೇಳಿತ್ತು.

ಇನ್ನಷ್ಟು ಓದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.