ADVERTISEMENT

ಚಂದ್ರಯಾನ–2 ಉಡ್ಡಯನ ಇದೇ 22ಕ್ಕೆ ಮರು ನಿಗದಿ

ತಾಂತ್ರಿಕ ದೋಷದಿಂದ 3 ದಿನಗಳ ಹಿಂದೆ ರದ್ದುಗೊಂಡಿದ್ದ ಉಡ್ಡಯನ

ಪಿಟಿಐ
Published 18 ಜುಲೈ 2019, 20:00 IST
Last Updated 18 ಜುಲೈ 2019, 20:00 IST
ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್
ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್   

ಬೆಂಗಳೂರು: ಇದೇ 22ರಂದು ಚಂದ್ರಯಾನ–2 ಉಡ್ಡಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ನಿರ್ಧರಿಸಿದೆ. ಅಂದು ಮಧ್ಯಾಹ್ನ 2.43ಕ್ಕೆ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ ನಭಕ್ಕೆ ಚಿಮ್ಮಲಿದೆ.

ಈ ಮುನ್ನ ಜುಲೈ 15ರಂದು ನೌಕೆ ಉಡ್ಡಯನಕ್ಕೆ ಯೋಜಿಸಲಾಗಿತ್ತು. ಆದರೆ ಉಡ್ಡಯನಕ್ಕೆ 56 ನಿಮಿಷಗಳು ಬಾಕಿ ಇರುವಾಗ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ರದ್ದುಪಡಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಹೊಸ ದಿನಾಂಕವನ್ನು ಇಸ್ರೊ ಪ್ರಕಟಿಸಿದೆ.

‘ಕೋಟ್ಯಂತರ ಭಾರತೀಯರ ಕನಸುಗಳನ್ನು ಹೊತ್ತು, ಜಿಎಸ್‌ಎಲ್‌ವಿ ಮಾರ್ಕ್–3 ರಾಕೆಟ್ ಆಗಸಕ್ಕೆ ಚಿಮ್ಮಲು ಸಿದ್ಧವಾಗಿದೆ’ ಎಂದು ಇಸ್ರೊ ಟ್ವೀಟ್ ಮಾಡಿದೆ.

ADVERTISEMENT

ಸ್ವದೇಶಿ ಕ್ರಯೋಜನಿಕ್ ಎಂಜಿನ್‌ಗೆ ಇಂಧನ ತುಂಬುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ₹976 ಕೋಟಿ ವೆಚ್ಚದ ಯೋಜನೆಯನ್ನು ತರಾತುರಿಯಲ್ಲಿ ಮುಗಿಸದೆ, ದೊಡ್ಡ ಅನಾಹುತವನ್ನು ಇಸ್ರೊ ತಡೆದಿದೆ. ಸಮಸ್ಯೆಯ ಗಾಂಭೀರ್ಯ ಅರಿತು ಉಡ್ಡಯನ ಮುಂದೂಡಿದ ತಂಡವನ್ನು ಅಭಿನಂದಿಸಬೇಕು ಎಂದು ಹಲವು ಬಾಹ್ಯಾಕಾಶ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು.

ಇಸ್ರೊ ಕೈಗೆತ್ತಿಕೊಂಡಿರುವ ಅತ್ಯಂತ ಕ್ಲಿಷ್ಟ ಬಾಹ್ಯಾಕಾಶ ಯೋಜನೆಚಂದ್ರಯಾನ–2 ಎಂದು ಇಸ್ರೊ ಅಧ್ಯಕ್ಷ ಡಾ.ಶಿವನ್ ಹೇಳಿದ್ದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ನೌಕೆಯನ್ನು ಇಳಿಸುವುದು ಯೋಜನೆಯ ಬಹುಮುಖ್ಯವಾದ ಕಾರ್ಯಕ್ರಮವಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.