ನವದೆಹಲಿ:ಚಂದ್ರಯಾನ–2 ರ ಲ್ಯಾಂಡರ್ ‘ವಿಕ್ರಮ್' ಚಂದ್ರನ ನೆಲಕ್ಕೆ ರಭಸದಿಂದ ಕುಸಿದಿತ್ತು. ವೇಗ ಕಡಿಮೆಯಾದ ಕಾರಣ ಗುರಿ ಮುಟ್ಟುವ ಮುನ್ನ ಹಾರ್ಡ್ ಲ್ಯಾಂಡಿಂಗ್ ಆಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಬುಧವಾರ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮೊದಲ ಹಂತದಲ್ಲಿ ಲ್ಯಾಂಡರ್ ಚಂದ್ರನ ನೆಲದಿಂದ 30ಕಿಮೀ-7.4ಕಿಮೀ ಮೇಲಿತ್ತು. ಆಮೇಲೆ ವೇಗವು ಸೆಕೆಂಡ್‌ಗೆ 1,683 ಇದ್ದದ್ದುಸೆಕೆಂಡ್‌ಗೆ 146ಮೀಟರ್ ಆಗಿ ಕಡಿಮೆಯಾಯಿತು.
ಎರಡನೇ ಹಂತದಲ್ಲಿ ಲ್ಯಾಂಡರ್ ಇಳಿಯುವಾಗ ವೇಗದಲ್ಲಿನ ಇಳಿಕೆ ನಿರ್ಧಾರಿತ ವೇಗಕ್ಕಿಂತ ಜಾಸ್ತಿಯಾಗಿತ್ತು. ಆ ರೀತಿ ಬದಲಾವಣೆ ಆದಾಗ ನೆಲದ ಮೇಲೆ ಇಳಿಯಲು ಇರುವ ವೇಗಲು ನಿರ್ಧಾರಿತ ಮಾನದಂಡಕ್ಕಿಂತ ಭಿನ್ನವಾಗಿತ್ತು. ಇದರ ಪರಿಣಾಮವಾಗಿ ವಿಕ್ರಮ್ ಲ್ಯಾಂಡರ್ ಗುರಿ ಮುಟ್ಟುವುದಕ್ಕಿಂತ ಮುನ್ನ 500 ಮೀಟರ್ ದೂರದಲ್ಲಿ ರಭಸದಿಂದ ಕುಸಿದಿತ್ತು ಎಂದಿದ್ದಾರೆ.
ಇದನ್ನೂ ಓದಿ:ಪತ್ತೆಯಾಗದ ವಿಕ್ರಮ್ ಲ್ಯಾಂಡರ್ ನಾಸಾ ಮಾಹಿತಿ
ಚಂದ್ರಯಾನದ ಉಡ್ಡಯನ, ಕಕ್ಷೆಯಲ್ಲಿನ ಚಲನೆ, ಲ್ಯಾಂಡ್ ಆದ ನಂತರ ಮಾಡಬೇಕಾದ ಪ್ರಕ್ರಿಯೆಗಳು ಎಲ್ಲವೂ ಸುಗಮವಾಗಿ ನಡೆದಿತ್ತು.
ವೈಜ್ಞಾನಿಕ ಉದ್ದೇಶಗಳಿಗೆ ಸಂಬಂಧಿಸಿದಂತೆ, ಕಕ್ಷೆಯ ಎಲ್ಲ ಎಂಟು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳು ವಿನ್ಯಾಸಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅವು ಅಮೂಲ್ಯವಾದ ವೈಜ್ಞಾನಿಕ ಡೇಟಾವನ್ನು ನೀಡುತ್ತಿವೆ.
ನಿಖರವಾದ ಉಡಾವಣಾ ಮತ್ತು ಕಕ್ಷೀಯ ಕುಶಲತೆಯಿಂದಾಗಿ, ಆರ್ಬಿಟರ್‌ನ ಆಯಸ್ಸನ್ನುಏಳು ವರ್ಷಗಳಿಗೆ ಹೆಚ್ಚಿಸಲಾಗಿದೆ.ವಿಜ್ಞಾನಿಗಳು ನಿರಂತರವಾಗಿ ಆರ್ಬಿಟರ್ ಕಳುಹಿಸುತ್ತಿರುವ ಮಾಹಿತಿಯನ್ನು ಪಡೆಯುತ್ತಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ಯೂಸರ್ ಮೀಟ್‌ನಲ್ಲಿಈ ಬಗ್ಗೆ ಪರಾಮರ್ಶೆ ಮಾಡಲಾಗಿತ್ತುಎಂದು ಸಚಿವರುಹೇಳಿದ್ದಾರೆ.
ಇದನ್ನೂ ಓದಿ:ಚಂದ್ರಯಾನ–2ರ ಶೇ 98 ಉದ್ದೇಶ ಈಡೇರಿದೆ: ಶಿವನ್
ಸೆಪ್ಟೆಂಬರ್ 2ರಂದು ವಿಕ್ರಮ್ ಆರ್ಬಿಟರ್‌ನಿಂದ ಕಳಚಿಕೊಂಡು. ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಹಗುರವಾಗಿ ಇಳಿಯುವ ಪ್ರಯತ್ನ ಮಾಡಿತ್ತು. ಸೆ.7ರ ನಸುಕಿನ 1.38ಕ್ಕೆ ಲ್ಯಾಂಡರ್ ಗಗನನೌಕೆಯಿಂದ ಕಳಚಿಕೊಂಡಿತ್ತು. ಇದಾದ 10 ನಿಮಿಷಗಳಲ್ಲಿ ಮೇಲ್ಮೈನತ್ತ ಸಾಗುವ ವೇಗವನ್ನು ಸೆಕೆಂಡ್‌ಗೆ 1,640 ಮೀಟರ್ ವೇಗದಿಂದ 140 ಮೀಟರ್‌ಗೆ ಕಡಿಮೆ ಮಾಡಿಕೊಂಡಿತ್ತು. ಚಂದ್ರನ ಮೇಲ್ಮೈ ಸನಿಹಕ್ಕೆ ಬಂದ ಲ್ಯಾಂಡರ್ ಕೊನೆಯ ನಿಮಿಷಗಳಲ್ಲಿ ಭೂನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.