ತಿರುಪತಿ : ಚಂದ್ರಯಾನ –3 ಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ)ಯ ವಿಜ್ಞಾನಿಗಳ ತಂಡ ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.
ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷ ಅಧಿಕಾರಿಗಳಿದ್ದ ತಂಡ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ವಿಡಿಯೊ ಹರಿದಾಡಿದ್ದು, ವಿಜ್ಞಾನಿಗಳ ಭೇಟಿಯ ಬಗ್ಗೆ ಟಿಟಿಡಿ ದೃಢಪಡಿಸಿದೆ.
‘ಹೌದು, ಇಸ್ರೊ ತಂಡ ತಿರುಮಲಕ್ಕೆ ಭೇಟಿ ನೀಡಿದೆ. ಆದರೆ ನಮ್ಮ ಪ್ರಚಾರ ವಿಭಾಗ ಅದನ್ನು ವರದಿ ಮಾಡಿಲ್ಲ. ಇಸ್ರೊ ಅಧಿಕಾರಿಗಳು ಸಾಮಾನ್ಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದು ಕಡಿಮೆ’ ಎಂದು ಟಿಟಿಡಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ನಾಳೆ (ಶುಕ್ರವಾರ) ಚಂದ್ರಯಾನ –3 ಮಧ್ಯಾಹ್ನ 2.35ಕ್ಕೆ ಉಡಾವಣೆಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು ಆ. 23ರ ಸುಮಾರಿಗೆ ಚಂದ್ರನ ಕಕ್ಷೆಯನ್ನು ತಲುಪಲಿದೆ. ನಂತರದ15 ದಿನಗಳಲ್ಲಿ ನೌಕೆ ಚಂದ್ರನ ಮೇಲೆ ಇಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.