ADVERTISEMENT

Chandrayaan-3: ಲ್ಯಾಂಡ್ ಆದ ಬಳಿಕ ತೆಗೆದ ಚಿತ್ರಗಳನ್ನು ಹಂಚಿಕೊಂಡ ಇಸ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2023, 17:27 IST
Last Updated 23 ಆಗಸ್ಟ್ 2023, 17:27 IST
   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಕಳೆದ ಹಲವು ವರ್ಷಗಳ ಕನಸು ಇಂದು ನನಸಾಗಿದೆ. ಚಂದ್ರಯಾನ–3 ಯಶಸ್ಸು ಕಂಡಿದೆ. ವಿಕ್ರಮ್ ಲ್ಯಾಂಡರ್ ಸಂಜೆ 6.04ರ ಸುಮಾರಿಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಯೋಜನೆ ಯಶ ಕಂಡಿದೆ.

ಲ್ಯಾಂಡ್ ಆದ ಬಳಿಕ ವಿಕ್ರಮ ಲ್ಯಾಂಡರ್ ಜೊತೆ ಇಸ್ರೊ ಯಶಸ್ವಿಯಾಗಿ ಸಂವಹನ ಸಂಪರ್ಕ ಸಾಧಿಸಿದೆ.

ಚಂದ್ರಯಾನ-3 ಲ್ಯಾಂಡರ್ ಮತ್ತು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (MOX)-ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್(ISTRAC)ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಇಸ್ರೊ ಎಕ್ಸ್‌ನಲ್ಲಿ(ಟ್ವಿಟರ್) ಪೋಸ್ಟ್ ಮಾಡಿದೆ.

ADVERTISEMENT

ವಿಕ್ರಮ್ ಲ್ಯಾಂಡರ್ ಇಳಿಯುವಾಗ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ತೆಗೆದ ಚಿತ್ರಗಳನ್ನೂ ಇಸ್ರೊ ಪೋಸ್ಟ್ ಮಾಡಿದೆ.

ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ ಬಳಿಕ ಲ್ಯಾಂಡಿಂಗ್ ಇಮೇಜರ್ ಕ್ಯಾಮೆರಾ ಸೆರೆಹಿಡಿದ ಚಿತ್ರಗಳನ್ನೂ ಇಸ್ರೋ ಹಂಚಿಕೊಂಡಿದೆ. ಚಿತ್ರದಲ್ಲಿ ಚಂದ್ರಯಾನ-3ನ ಲ್ಯಾಂಡಿಂಗ್ ಸೈಟ್‌ನ ಒಂದು ಭಾಗವನ್ನು ಕಾಣಬಹುದಾಗಿದೆ. ಲ್ಯಾಂಡರ್‌ನ ಒಂದು ಕಾಲು ಮತ್ತು ಅದರ ಜೊತೆಗಿರುವ ನೆರಳು ಕೂಡ ಚಿತ್ರದಲ್ಲಿ ಕಾಣಿಸುತ್ತದೆ. ಚಂದ್ರಯಾನ-3 ನೌಕೆ ಚಂದ್ರನ ಮೇಲ್ಮೈಯಲ್ಲಿ ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿದೆ ಎಂದು ಇಸ್ರೊ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.