ADVERTISEMENT

ಸಂವಿಧಾನ ಬದಲಾವಣೆಗೆ ಪ್ರಯತ್ನಿಸುವವರನ್ನು ಬದಲಾಯಿಸಿ: ಪ್ರಿಯಾಂಕಾ ಗಾಂಧಿ ವಾದ್ರಾ

ಪಿಟಿಐ
Published 30 ಸೆಪ್ಟೆಂಬರ್ 2024, 9:45 IST
Last Updated 30 ಸೆಪ್ಟೆಂಬರ್ 2024, 9:45 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ಅಂಬಾಲಾ: ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಸಂವಿಧಾನ ಬದಲಾವಣೆಗೆ ಕುರಿತು ಮಾತನಾಡುವವರನ್ನು ಬದಲಾಯಿಸಬೇಕು. ಈ ಮೂಲಕ ಅವರಿಗೆ ಪಾಠ ಕಳಿಸಬೇಕೆಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದ ರೈತರು, ಯೋಧರು, ಕ್ರೀಡಾಪಟುಗಳು ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ರಾಜ್ಯದ ಜನರಿಗೆ ಮೋಸ ಮಾಡಿದೆ. ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಯುವಜನತೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ?. ರೈತರು ಎದುರಿಸುತ್ತಿರುವ ಸಮಸ್ಯಗೆಳಿಗೆ ಪರಿಹಾರ ದೊರಕಿಸದ ಬಿಜೆಪಿ, ಪ್ರತಿಭಟನಾಕಾರರ ವಿರುದ್ಧ ಆಶ್ರು ವಾಯು ಹಾಗೂ ಲಾಠಿ ಪ್ರಯೋಗಿಸಿದ್ದರು ಎಂದು ಕಿಡಿಕಾರಿದ್ದಾರೆ.

ADVERTISEMENT

24 ಬೆಳೆಗಳಿಗೆ ಎಂಎಸ್‌ಪಿ ನೀಡುವ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಿಯಾಂಕಾ, ರಾಜ್ಯದಲ್ಲಿ 24 ಬೆಳೆಗಳಲ್ಲಿ 10 ಬೆಳೆಗಳು ಬೆಳೆಯುವುದೇ ಇಲ್ಲ. ಹಣದುಬ್ಬರ, ಭ್ರಷ್ಟಾಚಾರ, ಹಗರಣದಲ್ಲಿಯೇ ಬಿಜೆಪಿ ಮುಳುಗಿದೆ. ಮತ ಚಲಾಯಿಸದಂತೆ, ಅಧಿಕಾರಕ್ಕೆ ಅನುವು ಮಾಡಿಕೊಂಡದಂತೆ ಮನವಿ ಮಾಡಿದ್ದಾರೆ.

ಅಕ್ಟೋಬರ್ 5ರಂದು ಹರಿಯಾಣ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.