ಜೈಪುರ: ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ ಇಲ್ಲಿ ಮಾತನಾಡಿದ ಯೋಗ ಗುರು ರಾಮ್‌ದೇವ್, ‘ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಜೈಲಿಗೆ ಹಾಕಬೇಕು’ ಎಂದಿದ್ದಾರೆ.
‘ಪ್ರತಿಭಟನೆ ನಡೆಸುತ್ತಿರುವ ಸಹೋದರಿಯರ ವಿರುದ್ಧ ಬ್ರಿಜ್‌ಭೂಷಣ್ ಅವರು ಪ್ರತಿದಿನ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಖಂಡನಾರ್ಹ’ ಎಂದಿದ್ದಾರೆ.
ಮೂರು ದಿನಗಳ ಯೋಗ ಶಿಬಿರಕ್ಕಾಗಿ ಭಿಲ್ವಾರಕ್ಕೆ ಭೇಟಿ ನೀಡಿರುವ ರಾಮ್‌ದೇವ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ರಾಜಕೀಯಕ್ಕೆ ಸೇರುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರನ್ನೂ ಪ್ರಶಂಸಿಸಿದ ರಾಮ್‌ದೇವ್ ಅವರು, ‘ನನಗೆ ಯಾರೊಂದಿಗೂ ಶತ್ರುತ್ವವಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.