ADVERTISEMENT

ಕೋವಿಡ್ ನಿರ್ಬಂಧ: ರ‍್ಯಾಲಿ ರದ್ದಾಗಿ ಸಂಕಷ್ಟಕ್ಕೆ ಸಿಲುಕಿದ ಬಾಡಿಗೆ ವಿಮಾನ ಸೇವೆ

ಪಿಟಿಐ
Published 23 ಜನವರಿ 2022, 12:58 IST
Last Updated 23 ಜನವರಿ 2022, 12:58 IST
ಕೋವಿಡ್ ಸೋಂಕಿನ ಕಾರಣದಿಂದ ಚುನಾವಣಾ ರ‍್ಯಾಲಿಗೆ ಆಯೋಗ ನಿಷೇಧ
ಕೋವಿಡ್ ಸೋಂಕಿನ ಕಾರಣದಿಂದ ಚುನಾವಣಾ ರ‍್ಯಾಲಿಗೆ ಆಯೋಗ ನಿಷೇಧ    

ನವದೆಹಲಿ: ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಪಂಚರಾಜ್ಯಗಳಲ್ಲಿ ಬಹಿರಂಗ ಸಮಾವೇಶ ನಡೆಸುವುದಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಇದರಿಂದಾಗಿ ಬಾಡಿಗೆ ಹೆಲಿಕಾಪ್ಟರ್ ಮತ್ತು ವಿಮಾನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ, ಕೋವಿಡ್ ಸಮಸ್ಯೆಯಿಂದಾಗಿ ಜನರನ್ನು ಸೇರಿಸಿ ರ‍್ಯಾಲಿ ನಡೆಸುವುದಕ್ಕೆ ನಿಷೇಧ ಹೇರಲಾಗಿದೆ.

ಆಯೋಗದ ನಿರ್ಬಂಧದಿಂದಾಗಿ ರಾಜಕೀಯ ಪಕ್ಷಗಳ ನಾಯಕರು ರ‍್ಯಾಲಿಯಲ್ಲಿ ಭಾಗವಹಿಸುತ್ತಿಲ್ಲ. ಇದರಿಂದಾಗಿ ಬಾಡಿಗೆ ಹೆಲಿಕಾಪ್ಟರ್, ಲಘು ವಿಮಾನಗಳನ್ನು ಬಳಸುವವರು ಇಲ್ಲವಾಗಿದೆ. ಚುನಾವಣೆ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ನಿಷೇಧದಿಂದಾಗಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಕ್ಲಬ್ ಒನ್ ಏರ್ ಸಿಇಒ ರಾಜನ್ ಮೆಹ್ರಾ ಸುದ್ದಿಸಂಸ್ಥೆ ‘ಪಿಟಿಐ‘ಗೆ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಚುನಾವಣೆ ಸಂಬಂಧಿ ಬುಕಿಂಗ್ ತೀರಾ ಕಡಿಮೆಯಾಗಿದೆ ಎಂದು ಜೆಟ್‌ಸೆಟ್‌ಗೊ ಏವಿಯೇಷನ್‌ನ ಸ್ಥಾಪಕಿ ಮತ್ತು ಸಿಇಒ ಕನಿಕಾ ತೇಕ್ರಿವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.