ADVERTISEMENT

ಕ್ವಾಲಿಟಿ ಲಿಮಿಟೆಡ್‌ ವಿರುದ್ಧ ಸಿಬಿಐನಿಂದ ₹1,400 ಕೋಟಿ ವಂಚನೆ ಪ್ರಕರಣ

ಏಜೆನ್ಸೀಸ್
Published 21 ಸೆಪ್ಟೆಂಬರ್ 2020, 13:02 IST
Last Updated 21 ಸೆಪ್ಟೆಂಬರ್ 2020, 13:02 IST
   

ನವದೆಹಲಿ: ಐಸ್ರೀಂ ತಯಾರಿಕಾ ಕಂಪನಿ 'ಕ್ವಾಲಿಟಿ ಲಿಮಿಟೆಡ್‌' ವಿರುದ್ಧ ಸಿಬಿಐ ಸೋಮವಾರ ₹1,400 ಕೋಟಿ ಮೊತ್ತದ ವಂಚನೆ ಪ್ರಕರಣ ದಾಖಲಿಸಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ಒಕ್ಕೂಟದ ಬ್ಯಾಂಕ್‌ಗಳಿಗೆ ಕ್ವಾಲಿಟಿ ಲಿಮಿಡೆಡ್‌ನಿಂದ ₹1,400 ಕೋಟಿ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ನೀಡಿರುವ ದೂರಿನ ಅನ್ವಯ ಸಿಬಿಐ ಪ್ರಕರಣ ದಾಖಲಿಸಿದೆ. ದೆಹಲಿ, ಬುಲಂದ್‌ಷಹರ್‌, ಅಜ್ಮೀರ್‌ ಹಾಗೂ ಪಲ್ವಾಲ್‌ ಸೇರಿದಂತೆ ಎಂಟು ಕಡೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.

ADVERTISEMENT

ಕಂಪನಿಯ ನಿರ್ದೇಶಕರಾದ ಸಂಜಯ್‌ ಧಿಂಗ್ರ, ಸಿದ್ಧಾಂತ್‌ ಗುಪ್ತ ಹಾಗೂ ಅರುಣ್‌ ಶ್ರೀವಾಸ್ತವ ಸೇರಿದಂತೆ ಹಲವು ಜನರ ಹೆಸರು ಸಿಬಿಐ ಪ್ರಕರಣದಲ್ಲಿ ದಾಖಲಾಗಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತೆರಿಗೆ ಉಳಿಸಲು ನಡೆಸಿರುವ ವಹಿವಾಟುಗಳು (ಶಾಮ್‌ ಟ್ರ್ಯಾನ್ಯಾಕ್ಷನ್ಸ್), ಬ್ಯಾಂಕ್‌ ಫಂಡ್‌ಗಳನ್ನು ಪಲ್ಲಟಗೊಳಿಸಿರುವುದು, ದಾಖಲೆಗಳು ಮತ್ತು ರಸೀದಿಗಳನ್ನು ಸೃಷ್ಟಿಸಿರುವುದು, ತಪ್ಪು ಲೆಕ್ಕಗಳನ್ನು ನಿರೂಪಿಸುವ ಮೂಲಕ ಬ್ಯಾಂಕ್‌ಗಳಿಗೆ ಮೋಸ ಮಾಡಿರುವುದಾಗಿ ಕ್ವಾಲಿಟಿ ಲಿಮಿಟೆಡ್‌ ವಿರುದ್ಧ ಬ್ಯಾಂಕ್‌ ಆಫ್‌ ಇಂಡಿಯಾ ದೂರು ನೀಡಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಆಂಧ್ರ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌, ಐಡಿಬಿಐ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ಗಳಿಗೆವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.