ADVERTISEMENT

Chenab Rail Bridge: ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಲೋಕಾರ್ಪಣೆ ಶೀಘ್ರ?

ಸೇತುವೆ ಮೇಲೆ ಸಂಚರಿಸಿದ ರೈಲು: ರೈಲ್ವೆ ಅಧಿಕಾರಿಗಳಿಂದ ಪರಿಶೀಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2024, 14:36 IST
Last Updated 16 ಜೂನ್ 2024, 14:36 IST
<div class="paragraphs"><p>Chenab Rail Bridge</p></div>

Chenab Rail Bridge

   

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್‌ ನದಿ ಮೇಲೆ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆ ಲೋಕಾರ್ಪಣೆ ಸಮೀಪಿಸಿದೆ.

ಭಾನುವಾರ ಈ ರೈಲ್ವೆ ಸೇತುವೆಯಲ್ಲಿ ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಹಳಿ ಸೇರಿದಂತೆ ಇತರ ತಾಂತ್ರಿಕ ಕೆಲಸಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಪ್ರಾಯೋಗಿಕವಾಗಿ ವ್ಯಾಗನ್ ಟವರ್ ಓಡಿಸಿ ಪರಿಶೀಲನೆ ಮಾಡಲಾಗಿದೆ.

ADVERTISEMENT

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಎಂಜಿನಿಯರ್‌ಗಳು ಹಾಗೂ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಸೇತುವೆ ಲೋಕಾರ್ಪಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1.3 ಕಿ.ಮೀ ಉದ್ದದ ಸೇತುವೆಯು ನದಿಪಾತ್ರದಿಂದ 359 ಮೀಟರ್‌ ಎತ್ತರದಲ್ಲಿದೆ. ಅಂದರೆ ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ ಇರಲಿದೆ. ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸಂಪರ್ಕದ ಭಾಗವಾಗಿ ಈ ಸೇತುವೆ ನಿರ್ಮಾಣವಾಗುತ್ತಿದೆ. 

ಅತ್ಯಂತ ಸವಾಲಿನ ಕೆಲಸವನ್ನು ಪೂರ್ಣಗೊಳಿಸಿರುವ ಸಿಬ್ಬಂದಿಯನ್ನು ಶ್ಲಾಘಿಸಲಾಗುತ್ತಿದೆ. ಈ ವಿಸ್ಮಯವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.