ADVERTISEMENT

ಷಿ ಜಿನ್‌ಪಿಂಗ್‌ಗೆ ಜನಪದ ಕಲಾ ತಂಡಗಳ ಸ್ವಾಗತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 11:04 IST
Last Updated 11 ಅಕ್ಟೋಬರ್ 2019, 11:04 IST
ಚೆನ್ನೈಗೆ ಬಂದಿಳಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ಜನಪದ ಕಲಾ ತಂಡಗಳಿಂದ ಸ್ವಾಗತ ಕೋರಲಾಯಿತು.
ಚೆನ್ನೈಗೆ ಬಂದಿಳಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ಜನಪದ ಕಲಾ ತಂಡಗಳಿಂದ ಸ್ವಾಗತ ಕೋರಲಾಯಿತು.   

ಚೆನ್ನೈ: ಎರಡು ದಿನ ಭಾರತ ಭೇಟಿಗಾಗಿಚೀನಾ ಅಧ್ಯಕ್ಷಷಿ ಜಿನ್‌ಪಿಂಗ್ಅವರು ಶುಕ್ರವಾರ ಚೆನ್ನೈನಲ್ಲಿ ಬಂದಿಳಿದರು.ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂನಲ್ಲಿ ನಡೆಯಲಿರುವ ಅನೌಪಚಾರಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.

ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರನ್ನು ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಮತ್ತು ಷಿ ಜಿನ್‌ಪಿಂಗ್ ಎರಡನೇ ಬಾರಿಗೆ ಅನೌಪಚಾರಿಕ ಸಭೆ ಸೇರಲಿದ್ದಾರೆ.

ಪ್ರಧಾನಿ ಮೋದಿ ಮತ್ತು ಷಿ ಜಿನ್‌ಪಿಂಗ್‌ ನಡುವೆ ಒಟ್ಟು 6 ಗಂಟೆಗಳ ಮಾತುಕತೆ ನಡೆಯಲಿದ್ದು, ಈ ಪೈಕಿ 40 ನಿಮಿಷದ ಭೇಟಿ ಅತ್ಯಂತ ಹೆಚ್ಚಿನ ಅವಧಿಯ ಸಭೆಯಾಗಿರಲಿದೆ. ಉಭಯ ರಾಷ್ಟ್ರಗಳ ಪ್ರತಿನಿಧಿಗಳಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಲಿದೆ.

ADVERTISEMENT

ಷಿ ಜಿನ್‌ಪಿಂಗ್‌ ಅವರು ಚೆನ್ನೈಗೆ ಬಂದಿಳಿದಾಗ ವಿಮಾನನಿಲ್ದಾನದಲ್ಲಿಅವರನ್ನು ಜನಪದ ಕಲಾವಿದರು ನೃತ್ಯ ಪ್ರದರ್ಶಿಸಿ ಸ್ವಾಗತಿಸಿದರು.

ಷಿ ಜಿನ್‌ಪಿಂಗ್ ಅವರುಇಂದುರಾತ್ರಿಯ ಊಟಕ್ಕೆ ತಮಿಳುನಾಡು ಸಾಂಪ್ರದಾಯಿಕ ಶೈಲಿಯ ಅಡುಗೆ ರುಚಿ ನೋಡಲಿದ್ದಾರೆ. ತಕ್ಕಾಲಿ ರಸಂ(ಟೊಮೆಟೊರಸ), ಅರಚವಿಟ್ಟ ಸಾಂಬಾರ್‌, ಕಡಲೈಕುರ್ಮಾ ಹಾಗೂ ಕವನರಸಿ ಹಲ್ವಾ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.