ನವದೆಹಲಿ: ಈಶಾನ್ಯ ಭಾರತದ ವಿವಿಧ ರಾಜ್ಯಗಳಲ್ಲಿ ಶುಕ್ರವಾರ ಮುಂಗಾರು ಮಳೆ ಆರ್ಭಟಿಸಿದೆ. ಮೇಘಾಲಯದ ಪೂರ್ವ ಖಾಸಿ ಬೆಟ್ಟ ಪ್ರದೇಶದ ಸೊಹ್ರಾದಲ್ಲಿ (ಹಿಂದಿನ ಚಿರಾಪುಂಜಿ) 24 ಗಂಟೆಗಳಲ್ಲಿ 972 ಮಿ.ಮೀ ಮಳೆ ಸುರಿದಿದ್ದು, ಇದು ಹೊಸ ದಾಖಲೆಯಾಗಿದೆ.
1995ರ ಜೂನ್ ಬಳಿಕ, 24 ಗಂಟೆಗಳಲ್ಲಿ ಸುರಿದ ದಾಖಲೆಯ ಮಳೆ ಇದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಎರಡು ದಿನದ ಹಿಂದೆ ಒಂದೇ ದಿನ 811.6 ಮಿ.ಮೀ ಭಾರಿ ಮಳೆ ಸುರಿದಿದ್ದು, 27 ವರ್ಷಗಳ ದಾಖಲೆ ಸರಿಗಟ್ಟಿತ್ತು.
ಐಎಂಡಿ ಮಳೆಮಾಪನ ದಾಖಲೆ ನಿರ್ವಹಿಸಲು ಆರಂಭಿಸಿದ ನಂತರದ ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿ ಅಧಿಕ ಮಳೆಯಾಗುವ ಸ್ಥಳಗಳಲ್ಲಿ ಒಂದಾದ ಚಿರಾಪುಂಜಿಯಲ್ಲಿ ಒಂಬತ್ತು ಬಾರಿ ಜೂನ್ ತಿಂಗಳಲ್ಲಿ ಒಂದೇ ದಿನ 800 ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಐಎಂಡಿ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಸುನೀತ್ ದಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.