ಅಂಬಿಕಾಪುರ/ಸೂರಜ್‌ಪುರ: ಉತ್ತರ ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ಶುಕ್ರವಾರ 3.9 ತೀವ್ರತೆಯ ಕಂಪನ ಸಂಭವಿಸಿದ್ದು, ಯಾವುದೇ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅಂಬಿಕಾಪುರ ಪಟ್ಟಣದಲ್ಲಿ (ಸುರ್ಗುಜಾ ಜಿಲ್ಲೆಯ ಪ್ರಧಾನ ಕಛೇರಿ) ಬೆಳಿಗ್ಗೆ 10.28 ರ ಸುಮಾರಿಗೆ 3.9 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಇದರ ಕೇಂದ್ರಬಿಂದುವು ಸುಮಾರು 12 ಕಿಮೀ ದೂರದಲ್ಲಿದೆ’ ಎಂದು ರಾಯಪುರದ ಹವಾಮಾನ ಕೇಂದ್ರದ ಹವಾಮಾನ ತಜ್ಞ ಎಚ್‌ಪಿ ಚಂದ್ರು ತಿಳಿಸಿದ್ದಾರೆ.
ಅವರ ಪ್ರಕಾರ, ಕಳೆದ 10 ತಿಂಗಳಲ್ಲಿ ಇದು ಛತ್ತೀಸ್‌ಗಢದಲ್ಲಿ ಆರನೇ ಭೂಕಂಪವಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ರಾಜ್ಯದ ಉತ್ತರ ಭಾಗಗಳಲ್ಲಿ ಸಂಭವಿಸಿವೆ.
ಸ್ಥಳೀಯ ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲು ಮತ್ತು ಹಾನಿ ಸಂಭವಿಸಿದಲ್ಲಿ ವರದಿ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ಮೂರು ದಿನಗಳಿಂದ ಪ್ರತಿನಿತ್ಯ ಉತ್ತರ ಭಾರತದಲ್ಲಿ ಭೂಕಂಪನದ ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.