ADVERTISEMENT

ಛತ್ತೀಸಗಢ|ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ: ಇಬ್ಬರು ಯೋಧರು ಸಾವು, ಹಲವರಿಗೆ ಗಾಯ

ಪಿಟಿಐ
Published 18 ಸೆಪ್ಟೆಂಬರ್ 2024, 10:33 IST
Last Updated 18 ಸೆಪ್ಟೆಂಬರ್ 2024, 10:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯ್‌ಪುರ: ಛತ್ತೀಸಗಢದ ಬಲರಾಂಪುರ ಜಿಲ್ಲೆಯ ಶಿಬಿರವೊಂದರಲ್ಲಿ ಸಶಸ್ತ್ರ ಪಡೆಯ (ಸಿಎಎಫ್) ಸಹೋದ್ಯೋಗಿಯೊಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಿಎಎಫ್ ಯೋಧರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಸಿಎಎಫ್‌ನ 11ನೇ ಬೆಟಾಲಿಯನ್‌ನ ಶಿಬಿರದಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ADVERTISEMENT

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾನ್‌ಸ್ಟೆಬಲ್ ಅಜಯ್ ಸಿದರ್ ರೈಫಲ್‌ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾನ್‌ಸ್ಟೆಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕಾನ್‌ಸ್ಟೆಬಲ್ ಸಂದೀಪ್ ಪಾಂಡೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ (ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಶಬ್ಧ ಕೇಳಿದ ತಕ್ಷಣ ಸ್ಥಳಕ್ಕೆ ಬಂದ ಇತರೆ ಸಿಎಎಫ್ ಯೋಧರು ಆರೋಪಿ ಕಾನ್‌ಸ್ಟೆಬಲ್ ಅಜಯ್ ಸಿದರ್ ಅವರನ್ನು ಸೆರೆ ಹಿಡಿದರು. ಘಟನೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್‌ ವಿರೋಧಿ ಕಾರ್ಯಾಚರಣೆಗಾಗಿ ಜಾರ್ಖಂಡ್‌ ರಾಜ್ಯದ ಗಡಿ ಭಾಗದ ಸಮೀಪ ಸಿಎಎಫ್ ಪಡೆ ಬೀಡುಬಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.