ADVERTISEMENT

ಭೂಕುಸಿತ, ಪ್ರವಾಹ ಪೀಡಿತ ಕೇರಳ, ತ್ರಿಪುರಾಕ್ಕೆ ತಲಾ ₹ 15 ಕೋಟಿ: ಛತ್ತೀಸಗಢ ಸಿಎಂ

ಪಿಟಿಐ
Published 30 ಆಗಸ್ಟ್ 2024, 9:40 IST
Last Updated 30 ಆಗಸ್ಟ್ 2024, 9:40 IST
<div class="paragraphs"><p>ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್</p></div>

ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್

   

(ಪಿಟಿಐ ಚಿತ್ರ)

ರಾಯಪುರ: ಭಾರಿ ಮಳೆ ಹಾಗೂ ಭೂಕುಸಿತದಿಂದ ಹಾನಿಗೊಳಗಾಗಿರುವ ಕೇರಳ ಹಾಗೂ ತ್ರಿಪುರಾಕ್ಕೆ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರು, ತಲಾ ₹15 ಕೋಟಿ ನೆರವು ಘೋಷಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

'ವಿಪತ್ತು ಪರಿಹಾರ ನಿಧಿಯಿಂದ ಕೇರಳ ಹಾಗೂ ತ್ರಿಪುರಾಕ್ಕೆ ತಲಾ ₹15 ನೆರವು ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ' ಎಂದು ಮುಖ್ಯಮಂತ್ರಿಗಳ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

'ಕಳೆದ ಕೆಲ ದಿನಗಳ ಹಿಂದೆ ಕೇರಳ ಮತ್ತು ತ್ರಿಪುರಾದಲ್ಲಿ ಸಂಭವಿಸಿದ್ದ ನೈಸರ್ಗಿಕ ವಿಕೋಪಗಳಿಂದ ಭಾರಿ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಇದು ಅತ್ಯಂತ ದುಖಃಕರ ಸಂಗತಿ, ವಿಪತ್ತು ಪೀಡಿತ ಜನರೊಂದಿಗೆ ನಾವಿದ್ದೇವೆ. ಇಂತಹ ಪ್ರತಿಕೂಲ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲು ಛತ್ತೀಸಗಢ ಸರ್ಕಾರ ಬದ್ಧವಾಗಿದೆ' ಎಂದು ಮುಖ್ಯಮಂತ್ರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.