ADVERTISEMENT

Chhattisgarh Election | 8 ನಕ್ಸಲ್ ಎನ್‌ಕೌಂಟರ್‌ಗಳು, 1 ಕಚ್ಚಾ ಬಾಂಬ್ ಸ್ಫೋಟ

ಪಿಟಿಐ
Published 8 ನವೆಂಬರ್ 2023, 5:01 IST
Last Updated 8 ನವೆಂಬರ್ 2023, 5:01 IST
<div class="paragraphs"><p>ಛತ್ತೀಸ್‌ಗಢ ಚುನಾವಣೆಯಲ್ಲಿ ಮತದಾನ ಮಾಡಿದ ನಾಗರಿಕರು</p></div>

ಛತ್ತೀಸ್‌ಗಢ ಚುನಾವಣೆಯಲ್ಲಿ ಮತದಾನ ಮಾಡಿದ ನಾಗರಿಕರು

   

– ಪಿಟಿಐ ಚಿತ್ರ

ರಾಯ‍ಪುರ: ಛತ್ತೀಸ್‌ಗಢ ವಿಧಾನಸಭೆಗೆ ಮಂಗಳವಾರ ನಡೆದ ಮೊದಲ ಹಂತದ ಮತದಾನದ ವೇಳೆಯಲ್ಲಿ ನಕ್ಸಲರು ಒಂದು ಕಚ್ಚಾ ಬಾಂಬ್‌ ಸ್ಫೋಟ ಮಾಡಿದ್ದಾರೆ. ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಎಂಟು ಗುಂಡಿನ ಚಕಮಕಿ ನಡೆದಿದೆ. 5 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಸುಕ್ಮಾ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಯ 4 ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಅದೇ ಜಿಲ್ಲೆಯಲ್ಲಿ ನಡೆದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೋಬ್ರಾ ಯೂನಿಟ್‌ನ ಕಮಾಂಡೊ ಒಬ್ಬರು ಗಾಯಗೊಂಡಿದ್ದಾರೆ.

ಕಾನ್ಕೇರ್‌ ಜಿ‌ಲ್ಲೆಯಲ್ಲಿ ಸೋಮವಾರ ಸಂಭವಿಸಿದ್ದ ಕಚ್ಚಾ ಬಾಂಬ್‌ ಸ್ಫೋಟದಿಂದ ಗಾಯಗೊಂಡಿದ್ದ ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್‌ ಯೋಧ ಮಂಗಳವಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಮಂಗಳವಾರ ಸುಕ್ಮಾ ಜಿಲ್ಲೆಯ ಬಂಡಾ, ಮಿನ್ಪ ಹಾಗೂ ಲಕಹ್ಪಾಲ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್ಕೇರ್ ಜಿಲ್ಲೆಯ ಛೊಟ್ಟೆ ಪಖಂಜುರ್‌ ಹಾಗೂ ಛೊಟ್ಟೆಬೆಟಿಯ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆದಿದೆ.

ಬಿಎಸ್‌ಎಫ್‌ನ ಜಂಟಿ ಪಡೆ ಹಾಗೂ ರಾಜ್ಯ ‍‍ಪೊಲೀಸ್‌ನ ಜಿಲ್ಲಾ ಮೀಸಲು ಪಡೆಯ ಕಾರ್ಯಾಚರಣೆಯಲ್ಲಿ ನಕ್ಸಲರಿಗೆ ಸೇರಿದ ಒಂದು ಎಕೆ–47 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಗುಂಡಿನ ಚಕಮಕಿಯಲ್ಲಿ ಕೆಲವು ನಕ್ಸಲರು ಸಾವಿಗೀಡಾಗಿರಬಹುದು ಅಥವಾ ಗಾಯಗೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಪಾಡೆದ ಗ್ರಾಮದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಕನಿಷ್ಠ ಮೂರು ಮಂದಿ ನಕ್ಸಲರು ಸಾವಿಗೀಡಾಗಿರಬಹುದು. ಮೃತದೇಹವನ್ನು ಹೊತ್ತು ನಕ್ಸಲರು ಪರಾರಿಯಾಗುವ ವಿಡಿಯೊ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾರಾಯಣಪುರ ಜಿಲ್ಲೆಯ ಗುಡಾಡಿ ಗ್ರಾಮದಲ್ಲಿ ಹಾಗೂ ದಾಂತೇವಾಡ ಜಿಲ್ಲೆಯ ಮಂಗ್ನರ್ ಗ್ರಾಮದಲ್ಲೂ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ. ಯಾವುದೇ ಸಾವು–ನೋವು ಉಂಟಾಗಿಲ್ಲ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.