ಧಮ್ತಾರಿ (ಛತ್ತೀಸ್‌ಗಡ): ಬಿಜೆಪಿಯ ಮಾಜಿ ಸಂಸದಚಂದುಲಾಲ್ ಸಾಹು ಅವರು ತಮ್ಮ ವಿಧವೆಸೊಸೆಗೆ ಮರು ಮದುವೆ ಮಾಡಿಸಿದ್ದಾರೆ.
ಚಂದುಲಾಲ್ ಸಾಹು ಅವರ ಪುತ್ರ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಅವರು ಪತ್ನಿ ಕಲ್ಯಾಣಿ ಹಾಗೂ ಒಂದೂವರೆ ವರ್ಷದ ಮಗುವನ್ನು ಅಗಲಿದ್ದರು.
ಸೊಸೆ ಮತ್ತು ಮೊಮ್ಮಗನ ಭವಿಷ್ಯದದೃಷ್ಟಿಯಿಂದ ತಾವೇ ಮುಂದೆ ನಿಂತು ಮದುವೆ ಮಾಡಿಸಿರುವುದಾಗಿ ಸಾಹು ಹೇಳಿದ್ದಾರೆ.
ಡಾ. ವೀರೇಂದ್ರ ಗಂಜೀರ್ ಕೂಡ ಪತ್ನಿಯನ್ನು ಕಳೆದುಕೊಂಡಿದ್ದರು. ಅವರಿಗೆ ಸಾಹು ಅವರು ಸೊಸೆಯನ್ನು ಕೊಟ್ಟು ಮದುವೆ ಮಾಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.