ADVERTISEMENT

ಛತ್ತೀಸ್‌ಗಡ: ಶಾಲಾ ಪಠ್ಯಗಳಲ್ಲಿ ಗಾಂಧೀಜಿ ಬೋಧನೆ ಅಳವಡಿಸಲಿರುವ ರಾಜ್ಯ ಸರ್ಕಾರ

ಪಿಟಿಐ
Published 29 ಸೆಪ್ಟೆಂಬರ್ 2021, 10:37 IST
Last Updated 29 ಸೆಪ್ಟೆಂಬರ್ 2021, 10:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಪುರ: ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು 5ರಿಂದ12ನೇ ತರಗತಿ ಪಠ್ಯದಲ್ಲಿ ಅವರ ಬೋಧನೆಗಳನ್ನು ಅಳವಡಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಗಾಂಧೀಜಿ ಅವರ ಬೋಧನೆಗಳನ್ನು ಒಳಗೊಳ್ಳುವ ಪಠ್ಯಕ್ರಮವನ್ನು ರೂಪಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಜೊತೆಗೆ ಅವರಲ್ಲಿ ಸ್ವಾವಲಂಬನೆಯ ಅರಿವು ಮೂಡುತ್ತದೆ ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ADVERTISEMENT

ಗಾಂಧೀಜಿಯವರ ಆಶಯದಂತೆ ನಗರ ಮತ್ತು ಗ್ರಾಮೀಣ ಭಾಗದ 5ರಿಂದ 12ನೇ ತರಗತಿಯ ಮಕ್ಕಳಲ್ಲಿ ಮೌಲಿಕ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ.ಇದರಿಂದ ಮಕ್ಕಳಲ್ಲಿ ಗ್ರಾಮೀಣ ಆರ್ಥಿಕತೆ, ನೀರು ಮತ್ತು ಮಣ್ಣಿನ ಸಂರಕ್ಷಣೆಯಂತಹ ಪ್ರಮುಖ ಸಮಸ್ಯೆಗಳ ಬಗ್ಗೆಯೂ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.