ADVERTISEMENT

Mizoram Election 2023: ಮಿಜೋರಾಂನಲ್ಲಿ ಶೇ 77 ರಷ್ಟು ಮತದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2023, 11:15 IST
Last Updated 7 ನವೆಂಬರ್ 2023, 11:15 IST
<div class="paragraphs"><p>ಚುನಾವಣೆ: ಶೇ 72 ಮತದಾನ</p></div>

ಚುನಾವಣೆ: ಶೇ 72 ಮತದಾನ

   

ಗುವಾಹಟಿ: ಮಿಜೋರಾಂ ವಿಧಾನಸಭೆ ಚುನಾವಣೆಯ ಮತದಾನವು ಮಂಗಳವಾರ ಶಾಂತಿಯುತವಾಗಿ ನಡೆಯಿತು. ಸಂಜೆ 4 ಗಂಟೆ ವೇಳೆಗೆ ಶೇ 77 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶ ತಿಳಿಸಿದೆ.

ಬೆಳಿಗ್ಗೆ 7 ಗಂಟೆಯಿಂದ 4 ಗಂಟೆವರೆಗೆ ಮತದಾನ ನಡೆದಿದೆ. ಮತಗಟ್ಟೆಗಳಲ್ಲಿ ಬೆಳಿಗ್ಗೆ ಹೆಚ್ಚು ಮತದಾರರಿರಲಿಲ್ಲ. ಆದರೆ, ಮಧ್ಯಾಹ್ನ 1 ಗಂಟೆ ಬಳಿಕ ಶೇ 50.64ರಷ್ಟು ಮತದಾನ ನಡೆದಿದೆ. 

ADVERTISEMENT

40 ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 174 ಅಭ್ಯರ್ಥಿಗಳು ಕಣದಲ್ಲಿದ್ದರು.
ಅವರಲ್ಲಿ 16 ಅಭ್ಯರ್ಥಿಗಳು ಮಹಿಳೆಯರು. ರಾಜ್ಯದಲ್ಲಿ ಒಟ್ಟು 8.57 ಲಕ್ಷ ಮತದಾರರಿದ್ದಾರೆ.

1,276 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. ಸುಮಾರು 6,000 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆಡಳಿತಾರೂಢ ಎಂಎನ್‌ಎಫ್‌, ಪ್ರಮುಖ ವಿರೋಧ ಪಕ್ಷ ಝೋರಂ ಪೀಪಲ್ಸ್‌ ಮೂವ್‌ಮೆಂಟ್ (ಝೆಡ್‌ಪಿಎಂ) ಮತ್ತು ಕಾಂಗ್ರೆಸ್‌ ಎಲ್ಲಾ 40 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಜೆಪಿ 23 ಕ್ಷೇತ್ರಗಳಲ್ಲಿ, ಎಎಪಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. 27 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. 

ರಾಜ್ಯದ ಮುಖ್ಯಮಂತ್ರಿ, ಮಿಜೋ ನ್ಯಾಷನಲ್‌ ಫ್ರಂಟ್‌ ಅಧ್ಯಕ್ಷ ಝೋರಮ್‌ಥಂಗಾ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಲಾಲ್‌ಸವ್ತಾ ಅವರು ಬೆಳಿಗ್ಗೆ 10 ಗಂಟೆಯೊಳಗೇ ಮತ ಚಲಾಯಿಸಿದವರಲ್ಲಿ ಪ್ರಮುಖರು.  

‘ನಾವು ಸ್ವಂತಬಲದ ಮೇಲೇ ಸರ್ಕಾರ ರಚಿಸುತ್ತೇವೆ’ ಎಂದು ಝೋರಮ್‌ಥಂಗಾ ಅವರು ವಿಶ್ವಾಸ
ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ ಮಿಜೋರಾಂ ಅತ್ಯಂತ ಚಿಕ್ಕ ರಾಜ್ಯ.

2018ರಲ್ಲಿ ಇಲ್ಲಿ ಶೇ 81.61ರಷ್ಟು ಮತದಾನ ಆಗಿತ್ತು. 

ಎಂಎನ್‌ಎಫ್‌, ಝೋರಂ ಪೀಪಲ್ಸ್‌ ಮೂವ್‌ಮೆಂಟ್ ಮತ್ತು ಕಾಂಗ್ರೆಸ್‌ ಎಲ್ಲಾ 40 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಜೆಪಿಯು 23 ಕ್ಷೇತ್ರಗಳಲ್ಲಿ, ಎಎಪಿ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 27 ಮಂದಿ ಪಕ್ಷೇತರರು ಕೂಡ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.