ADVERTISEMENT

ಚಿದಂಬರಂಗೆ ಆಸ್ಪತ್ರೆ ವಾಸ ಬೇಡ: ಸೊಳ್ಳೆ ಪರದೆ, ಮನೆ ಆಹಾರ ನೀಡಿ ಎಂದ ಹೈಕೋರ್ಟ್‌

ದೆಹಲಿ ಹೈಕೋರ್ಟ್‌ ಸೂಚನೆ

ಪಿಟಿಐ
Published 1 ನವೆಂಬರ್ 2019, 10:38 IST
Last Updated 1 ನವೆಂಬರ್ 2019, 10:38 IST
ಚಿದಂಬರಂ
ಚಿದಂಬರಂ   

ನವದೆಹಲಿ:ಐಎನ್‌ಎಕ್ಸ್‌ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಗ್ಯವಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದ್ದಾರೆ.

ಚಿದಂಬರಂ ಆರೋಗ್ಯಕ್ಕೆ ಸಂಬಂಧಿಸಿ ಏಮ್ಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ವೈದ್ಯಕೀಯ ಮಂಡಳಿ ನೀಡಿರುವ ವರದಿಯ ಮಾಹಿತಿಯನ್ನು ಕೋರ್ಟ್‌ಗೆ ಮೆಹ್ತಾ ತಿಳಿಸಿದರು.

ಚಿದಂಬರಂ ಅವರಿರುವ ಸೆಲ್‌ನ ಸುತ್ತ ಸ್ವಚ್ಛ ಮತ್ತು ನಿರ್ಮಲ ಪರಿಸರ ಇರುವಂತೆ ನೋಡಿಕೊಳ್ಳಲು ನ್ಯಾಯಮೂರ್ತಿ ಸುರೇಶ್ ಕೈತ್ ಅವರು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ ಮನೆಯಲ್ಲಿ ತಯಾರಿಸಿದ ಆಹಾರ, ಮಿನರಲ್ ವಾಟರ್, ಸೊಳ್ಳೆ ಪರದೆ ನೀಡುವಂತೆ ಸೂಚಿಸಿದ್ದಾರೆ.

ADVERTISEMENT

ನಿಯಮಿತವಾಗಿ ಚಿದಂಬರಂ ಆರೋಗ್ಯ ತಪಾಸಣೆ ನಡೆಸುವಂತೆಯೂ ಕೋರ್ಟ್‌ ಸೂಚಿಸಿದೆ.

ಚಿದಂಬರಂ ಅವರ ಆರೋಗ್ಯ ತಪಾಸಣೆ ನಡೆಸುವಂತೆ ಹೈಕೋರ್ಟ್ ಇತ್ತೀಚೆಗೆ ಆದೇಶನೀಡಿತ್ತು. ಹೀಗಾಗಿ ಆರೋಗ್ಯ ತಪಾಸಣೆ ನಡೆಸಿರುವ ಏಮ್ಸ್‌ ವೈದ್ಯಕೀಯ ಮಂಡಳಿ, ಚಿದಂಬರಂ ಆರೋಗ್ಯವಾಗಿದ್ದಾರೆ ಎಂದು ವರದಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.