ನವದೆಹಲಿ: ಸುಪ್ರೀಂ ಕೋರ್ಟ್‌ನ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಎಐ ವಕೀಲರ ಜತೆ ಮಾತುಕತೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ರಾಷ್ಟ್ರೀಯ ನ್ಯಾಯಾಂಗ ಪ್ರದರ್ಶನಾಲಯ ಮತ್ತು ವಸ್ತು ಸಂಗ್ರಹಾಲಯವನ್ನು ಸಿಜೆಐ ಉದ್ಘಾಟಿಸಿದರು. ಬಳಿಕ ಪ್ರದರ್ಶನಾಲಯದಲ್ಲಿ ಇರಿಸಲಾದ ಕೃತಕ ಬುದ್ದಿಮತ್ತೆಯ (ಎಐ) ವಕೀಲರೊಂದಿಗೆ ಸಂವಹನ ನಡೆಸಿದರು.
ಎಐ ವಕೀಲರನ್ನು ಪರೀಕ್ಷಿಸಲು ಭಾರತದ ಸಂವಿಧಾನದಲ್ಲಿ ಮರಣ ದಂಡನೆ ಶಿಕ್ಷೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಎಐ ವಕೀಲ, ಹೌದು, ಮರಣದಂಡನೆ ಭಾರತದಲ್ಲಿ ಸಂವಿಧಾನಬದ್ಧವಾಗಿದೆ. ಆದರೆ ಘೋರವಾದ ಕೃತ್ಯಗಳಂತಹ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ಆದೇಶಿಸಲಿದೆ’ ಎಂದಿದೆ.
ಈ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ನ ಮುಂದಿನ ಸಿಜೆಐ ಆಗಲಿರುವ ಸಂಜೀವ್ ಖನ್ನಾ ಕೂಡ ಹಾಜರಿದ್ದರು.
ಈ ಕುರಿತು ಮಾತನಾಡಿರುವ ಚಂದ್ರಚೂಡ್ ಅವರು, ‘ಈ ಪ್ರದರ್ಶನಾಲಯವು ಸುಪ್ರೀಂ ಕೋರ್ಟ್‌ನ ನೈತಿಕತೆಯ ಮತ್ತು ಸುಪ್ರೀಂ ಕೋರ್ಟ್ ದೇಶಕ್ಕೆ ಎಷ್ಟು ಅಗತ್ಯ ಎನ್ನುವುದಕ್ಕೆ ಕೈಗನ್ನಡಿಯಂತಿದೆ. ಯುವ ಜನತೆ ಹೆಚ್ಚು ಈ ಪ್ರದರ್ಶನಾಲಯಕ್ಕೆ ಭೇಟಿ ನೀಡಬೇಕು. ಮಕ್ಕಳು, ವಕೀಲರಲ್ಲದವರೂ ಇಲ್ಲಿಗೆ ಭೇಟಿ ನೀಡಿ ಕಾನೂನಿನ ಮಹತ್ವ, ವಕೀಲರು, ನ್ಯಾಯಾಧೀಶರು ಯಾವ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.