ADVERTISEMENT

ಬಾಲ್ಯ ವಿವಾಹಕ್ಕೆ ತಡೆ: ವಧುವಿನ ತಂದೆ ತಾಯಿ ವಿರುದ್ಧ ಎಫ್‌ಐಆರ್ ದಾಖಲು

ಐಎಎನ್ಎಸ್
Published 15 ಫೆಬ್ರುವರಿ 2023, 10:23 IST
Last Updated 15 ಫೆಬ್ರುವರಿ 2023, 10:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಜರುಗುತ್ತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದು, ಅಪ್ರಾಪ್ತಯ ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಚೈಲ್ಡ್‌ಲೈನ್ ಇಂಡಿಯಾ ತಂಡ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ತೆರಳಿ, ವಧುವಿನ ಪೋಷಕರಿಗೆ ಎಚ್ಚರಿಕೆ ನೀಡಿದ ಹೊರತಾಗಿಯೂ ವಿವಾಹ ಸಮಾರಂಭವನ್ನು ಮುಂದುವರೆಸಿದ್ದರು’ ಎಂದು ಪಿಲಿಭಿತ್‌ನ ಬಾಲ್ಯವಿವಾಹ ನಿಷೇಧ ಅಧಿಕಾರಿ ಪ್ರಗತಿ ಗುಪ್ತಾ ತಿಳಿಸಿದ್ದಾರೆ.

‘ಕಾನೂನಿನ ಪ್ರಕಾರ ವರನ ಕಡೆಯವರ ವಿರುದ್ಧವೂ ದೂರು ದಾಖಲಿಸಲು ಪೊಲೀಸರಿಗೆ ಸಾಕ್ಷ್ಯಗಳನ್ನು ಒದಗಿಸಲು ನಿರ್ಧಾರಿಸಿದ್ದೇವೆ’ ಎಂದು ಗುಪ್ತಾ ಹೇಳಿದ್ದಾರೆ.

ADVERTISEMENT

ಚೈಲ್ಡ್‌ಲೈನ್ ತಂಡದ ಸದಸ್ಯ ಪ್ರತುಲ್ ಸಿಂಗ್ ಲಿಖಿತ ದೂರನ್ನು ದಾಖಲಿಸಿದ್ದು, ಬಾಲಕಿಯ ತಂದೆ ಮತ್ತು ತಾಯಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.