ADVERTISEMENT

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ: ಕೇರಳದಲ್ಲಿ ಪಿ-ಹಂಟ್ ಕಾರ್ಯಾಚರಣೆ– 10 ಮಂದಿ ಬಂಧನ

ಪಿಟಿಐ
Published 19 ನವೆಂಬರ್ 2023, 2:43 IST
Last Updated 19 ನವೆಂಬರ್ 2023, 2:43 IST
 ಅಶ್ಲೀಲ ವಿಡಿಯೊ (pornography) ವೀಕ್ಷಣೆ
ಅಶ್ಲೀಲ ವಿಡಿಯೊ (pornography) ವೀಕ್ಷಣೆ   

ತಿರುವನಂತಪುರಂ: ಮಕ್ಕಳ ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಡಿಯೊಗಳನ್ನು ವೀಕ್ಷಿಸಿದ ಮತ್ತು ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ರಾಜ್ಯದಾದ್ಯಂತ 10 ಜನರನ್ನು ಬಂಧಿಸಿದ್ದು, 46 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಸಂಬಂಧ 123 ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಅಶ್ಲೀಲ ಸಿನಿಮಾಗಳ ವೀಕ್ಷಣೆಯನ್ನು ದಮನ ಮಾಡಲು ಕೇರಳ ಪೊಲೀಸರ ಪಿ-ಹಂಟ್ ಕಾರ್ಯಾಚರಣೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ.

ಮಲಪ್ಪುರಂ ಜಿಲ್ಲೆಯಿಂದ ನಾಲ್ವರನ್ನು ಬಂಧಿಸಲಾಗಿದ್ದು, ತಲಾ ಇಬ್ಬರನ್ನು ಇಡುಕ್ಕಿ ಮತ್ತು ಕೊಚ್ಚಿ ನಗರದಿಂದ, ತಲಾ ಒಬ್ಬರನ್ನು ಅಲಪ್ಪುಳ ಮತ್ತು ಎರ್ನಾಕುಲಂ ಗ್ರಾಮಾಂತರ ಪ್ರದೇಶಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆಪರೇಷನ್ ಪಿ-ಹಂಟ್ ಎನ್ನುವುದು ಮಕ್ಕಳ ವಿರುದ್ಧದ ಅಪರಾಧಗಳನ್ನು ತಡೆಯಲು ಕೇರಳ ಪೊಲೀಸ್ ಸಿಸಿಎಸ್‌ಇ (ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಯುವುದು) ತಂಡದ ವಿಶೇಷ ಕಾರ್ಯಾಚರಣೆ ಆಗಿದೆ.

ಕಾನೂನಿನ ಪ್ರಕಾರ, ಯಾವುದೇ ಮಕ್ಕಳ ಅಶ್ಲೀಲ ಕಂಟೆಂಟ್‌ಗಳನ್ನು ವೀಕ್ಷಿಸುವುದು, ಹಂಚಿಕೊಳ್ಳುವುದು ಅಥವಾ ಸಂಗ್ರಹಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.