ಬೀಜಿಂಗ್ : ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ಶನ್ನಾನ್ ಪ್ರಾಂತದಲ್ಲಿ ಚೀನಾ ಮಾನವರಹಿತ ಸ್ವಯಂಚಾಲಿತ ಹವಾಮಾನ ವೀಕ್ಷಣಾ ಕೇಂದ್ರ ಸ್ಥಾಪಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಪ್ರಾದೇಶಿಕವಾಗಿ ಸಂಘರ್ಷ ಉಂಟಾದರೆ ತನ್ನ ಸೇನೆಗೆ ಹವಾಮಾನ ಮಾಹಿತಿ ಹಾಗೂ ವಿಮಾನ ಮತ್ತು ಕ್ಷಿಪಣಿಗಳ ಕಾರ್ಯಾಚರಣೆಗೆ ನೆರವು ಒದಗಿಸುವ ಉದ್ದೇಶದಿಂದ ಚೀನಾ ಈ ಕೇಂದ್ರ ಸ್ಥಾಪಿಸಿದೆ ಎಂದುವರದಿಯಲ್ಲಿ ಹೇಳಲಾಗಿದೆ.
‘ತಾಪಮಾನ, ಗಾಳಿಯ ಒತ್ತಡ, ವೇಗ, ಮಾರ್ಗ, ತೇವಾಂಶ ಹಾಗೂ ಮಳೆ ಈ ಆರು ಅಂಶಗಳನ್ನುಹಿಂದಿಗಿಂತಲೂ ಹೆಚ್ಚು ನಿಖರವಾಗಿ ದಾಖಲಿಸಲು ಈ ಕೇಂದ್ರ ಸಾಮರ್ಥ್ಯ ಹೊಂದಿದೆ’ ಎಂದು ತಾಂತ್ರಿಕ ಉಸ್ತುವಾರಿ ಆಗಿರುವ ತಶಿ ನೊರ್ಬು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.