ಬೀಜಿಂಗ್: ಬೇಹುಗಾರಿಕೆ ನಡೆಸುವ ಉದ್ದೇಶದಿಂದ ಬಲೂನ್ ಹಾರಿಬಿಡಲಾಗಿದೆ ಎಂದು ಶಂಕಿಸಿ, ಖಂಡನಾ ನಿರ್ಣಯ ಕೈಗೊಂಡಿರುವ ಅಮೆರಿಕದ ಕೆಳಮನೆಯ ಕ್ರಮವನ್ನು ಚೀನಾ ಶುಕ್ರವಾರ ತಳ್ಳಿಹಾಕಿದೆ.
ಈ ಬಲೂನ್‌ಅನ್ನು ಹೊಡೆದುರುಳಿಸಿರುವುದು ರಾಜಕೀಯ ಪಿತೂರಿಯಾಗಿದ್ದು, ಇದೇ ವಿಷಯವನ್ನು ಅಮೆರಿಕ ದೊಡ್ಡದನ್ನಾಗಿ ಮಾಡುತ್ತಿದೆ ಎಂದೂ ಚೀನಾ ಹೇಳಿದೆ.
‘ಚೀನಾ ಈ ಬಗ್ಗೆ ತೀವ್ರ ಅಸಮಾಧಾನ ಹೊಂದಿದೆ. ಇಂಥ ನಡೆಯನ್ನು ಬಲವಾಗಿ ವಿರೋಧಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.