ADVERTISEMENT

ರೈಲು ಮಾರ್ಗ, ಸುರಂಗ ರಸ್ತೆ ನಿರ್ಮಾಣ : ನೇಪಾಳ–ಚೀನಾ ಒಪ್ಪಂದ

ಭಾರತದ ಮೇಲಿನ ಅವಲಂಬನೆ ತಪ್ಪಿಸುವ ಪ್ರಯತ್ನ

ರಾಯಿಟರ್ಸ್
Published 13 ಅಕ್ಟೋಬರ್ 2019, 20:15 IST
Last Updated 13 ಅಕ್ಟೋಬರ್ 2019, 20:15 IST
ಕಠ್ಮಂಡುವಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಪರಸ್ಪರ ಹಸ್ತಲಾಘವ ಮಾಡಿದರು  ಎಎಫ್‌ಪಿ ಚಿತ್ರ
ಕಠ್ಮಂಡುವಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಪರಸ್ಪರ ಹಸ್ತಲಾಘವ ಮಾಡಿದರು  ಎಎಫ್‌ಪಿ ಚಿತ್ರ   

ಕಠ್ಮಂಡು: ಟಿಬೆಟ್‌ಗೆ ರೈಲು ಮಾರ್ಗದ ಸಂಪರ್ಕ ಮತ್ತು ರಸ್ತೆ ಸುರಂಗ ನಿರ್ಮಿಸುವ ಎರಡು ಪ್ರತ್ಯೇಕ ಯೋಜನೆಗಳ ಅನುಷ್ಠಾನಕ್ಕೆ ನೇಪಾಳ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿವೆ.

ಚೀನಾ ಜತೆ ಹೆಚ್ಚು ಸಂಪರ್ಕ ಸಾಧಿಸುವ ಮೂಲಕ ವ್ಯಾಪಾರ ಮಾರ್ಗಕ್ಕೆ ಭಾರತದ ಮೇಲಿನ ಅವಲಂಬನೆಯನ್ನು ಅಂತ್ಯಗೊಳಿಸುವುದು ಈ ಒಪ್ಪಂದದ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.

70 ಕಿಲೋ ಮೀಟರ್‌ ಉದ್ದದ ರೈಲು ಮಾರ್ಗವು ಟಿಬೆಟ್‌ನ ಗ್ಯಿರಾನ್‌ ಮತ್ತು ಕಠ್ಮಂಡು ನಡುವೆ ಸಂಪರ್ಕ ಕಲ್ಪಿಸಲಿದೆ. ಚೀನಾದ ತಂಡವು ಈಗಾಗಲೇ ಈ ಬಗ್ಗೆ ಅಧ್ಯಯನ ನಡೆಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.