ADVERTISEMENT

ಅರುಣಾಚಲಕ್ಕೆ ಪ್ರಧಾನಿ ಮೋದಿ ಭೇಟಿ: ಚೀನಾ ಪ್ರತಿಭಟನೆ ಸಲ್ಲಿಕೆ

ಪಿಟಿಐ
Published 11 ಮಾರ್ಚ್ 2024, 14:07 IST
Last Updated 11 ಮಾರ್ಚ್ 2024, 14:07 IST
<div class="paragraphs"><p>ಪ್ರಧಾನಿ ಮೋದಿ</p></div>

ಪ್ರಧಾನಿ ಮೋದಿ

   

(ಚಿತ್ರ–ಪಿಟಿಐ)

ಬೀಜಿಂಗ್‌: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕಾಗಿ ಭಾರತಕ್ಕೆ ರಾಜತಾಂತ್ರಿಕವಾಗಿ ಪ್ರತಿಭಟನೆ ಸಲ್ಲಿಸಿರುವುದಾಗಿ ಚೀನಾ ಸೋಮವಾರ ಹೇಳಿದೆ. 

ADVERTISEMENT

ಭಾರತದ ನಡೆಯು ಉಭಯ ದೇಶಗಳ ನಡುವಣ ಗಡಿ ವಿವಾದವನ್ನು ‘ಇನ್ನಷ್ಟು ಸಂಕೀರ್ಣ’ಗೊಳಿಸುತ್ತದೆ ಎಂಬುದನ್ನು ಚೀನಾ ಪುನರುಚ್ಚರಿಸಿದೆ. 

ಮೋದಿ ಅವರು ಕಳೆದ ಶನಿವಾರ ಅರುಣಾಚಲಕ್ಕೆ ಭೇಟಿ ನೀಡಿದ್ದರಲ್ಲದೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ತವಾಂಗ್‌ ಸಂಪರ್ಕಿಸುವ ಸೇಲಾ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು.  

ಮೋದಿ ಭೇಟಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌, ‘ಅರುಣಾಚಲ ಪ್ರದೇಶ ಭಾರತದ ಭಾಗ ಎಂಬುದನ್ನು ಚೀನಾ ಒಪ್ಪುವುದಿಲ್ಲ‘ ಎಂದು ಹೇಳಿದ್ದಾರೆ. ‘ಝಾಂಗ್ನಾನ್‌ ಪ್ರದೇಶವು ಚೀನಾಕ್ಕೆ ಸೇರಿದೆ’ ಎಂದಿದ್ದಾರೆ.

ಅರುಣಾಚಲ ಪ್ರದೇಶವನ್ನು ಚೀನಾ ‘ದಕ್ಷಿಣ ಟಿಬೆಟ್‌’ ಎಂದು ಕರೆಯುತ್ತದೆ. ಮಾತ್ರವಲ್ಲ, ‘ಝಾಂಗ್ನಾನ್‌’ ಎಂದು ಹೆಸರಿಟ್ಟಿದೆ. ಪ್ರಧಾನಿ ಸೇರಿದಂತೆ ಭಾರತ ಇತರ ನಾಯಕರು ಇಲ್ಲಿಗೆ ಭೇಟಿ ನೀಡುವಾಗ ಚೀನಾ ಪ್ರತಿ ಬಾರಿಯೂ ತನ್ನ ಪ್ರತಿಭಟನೆ ಸಲ್ಲಿಸುತ್ತಾ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.