ನವದೆಹಲಿ: ಚೀನಾಗೆ ಸೇರಿದ ಭೂಭಾಗದಲ್ಲಿ ಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಬಾಲಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು(ಪಿಎಲ್ಎ) ಭಾರತೀಯ ಸೇನೆಗೆ ಒಪ್ಪಿಸಿದೆ.
ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, 'ಅರುಣಾಚಲ ಪ್ರದೇಶದ ಮಿರಂ ತರೊನ್‌ನನ್ನು ಚೀನಾದ ಪಿಎಲ್‌ಎಯು ಭಾರತೀಯ ಸೇನೆಗೆ ಒಪ್ಪಿಸಿದೆ. ಆತನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಬಾಲಕನೊಬ್ಬ ಪತ್ತೆಯಾಗಿದ್ದು, ಭಾರತೀಯ ಸೇನೆಗೆ ಒಪ್ಪಿಸುವ ಪ್ರಕ್ರಿಯೆ ನಡೆದಿದೆ ಎಂದು ಪಿಎಲ್ಎ ಭಾನುವಾರ ಹೇಳಿತ್ತು.
ಪಿಎಲ್‌ಎಯ ಸಿಬ್ಬಂದಿಯಿಂದ ಬಾಲಕನ ಅಪಹರಣವಾಗಿದೆ ಎಂಬ ಸಂಸದರೊಬ್ಬರ ಹೇಳಿಕೆಯ ಹಿಂದೆಯೇ ಈ ಬೆಳವಣಿಗೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.