ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಿದ್ದ ಚೀನಾದ ಮೀನುಗಾರಿಕಾ ಹಡಗಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯು ಪಿ–8ಐ ಕಡಲ ಪ್ರದೇಶ ಗಸ್ತು ಯುದ್ಧ ವಿಮಾನವನ್ನು ನಿಯೋಜಿಸಿದೆ.
ಈ ಕುರಿತು ನೌಕಾಪಡೆಯು ಮಾಹಿತಿ ನೀಡಿದೆ. ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಮುಳುಗಿರುವ ಚೀನಾದ ಮೀನುಗಾರಿಕಾ ಹಡಗಿನ ಶೋಧ ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆಯು ಮಾನವೀಯ ನೆಲೆಗಟ್ಟಿನಲ್ಲಿ ಪಿ–8ಐ ಯುದ್ಧ ವಿಮಾನವನ್ನು ನಿಯೋಜಿಸಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಬುಧವಾರ ಯುದ್ಧ ವಿಮಾನವು ತೀವ್ರ ಸ್ವರೂಪದ ಶೋಧ ಕಾರ್ಯಾಚರಣೆ ನಡೆಸಿದೆ. ಮುಳುಗಿರುವ ಹಡಗಿನದ್ದು ಎಂದು ಭಾವಿಸಲಾಗಿರುವ ಹಲವಾರು ವಸ್ತುಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಚೀನಾ, ಇಂಡೊನೇಷ್ಯಾ, ಫಿಲಿಪೀನ್ಸ್ ಪ್ರಜೆಗಳೂ ಇದ್ದಾರೆ ಎಂದು ನೌಕಾಪಡೆ ತಿಳಿಸಿದೆ. ಮುಳುಗಿರುವ ಹಡಗಿನಲ್ಲಿ 39 ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.