ಪಟ್ನಾ: ‘ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ತಮ್ಮ ಪಕ್ಷದಲ್ಲಿನ ಒಗ್ಗಟ್ಟು ಕಾಪಾಡಲು ವಿಫಲರಾಗಿದ್ದಾರೆ. ಹೀಗಾಗಿ, ಈಗ ರಾಜಕೀಯ ಬೆಳವಣಿಗೆ ನಡೆದಿವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಬಿತ್ತಿದಂತೆ ಬೆಳೆ ಬರುತ್ತದೆ. ಅದೇ ರೀತಿಯಲ್ಲಿ ಆ ಪಕ್ಷದಲ್ಲಿಯೂ ನಡೆದಿದೆ.ಚಿರಾಗ್ ಇನ್ನೂ ಯುವಕ. ಎನ್‌ಡಿಎ ಜತೆಗಿದ್ದ ಪಕ್ಷದ ನಾಯಕತ್ವವನ್ನು ಚಿರಾಗ್ ಪಾಸ್ವಾನ್ ವಹಿಸಿದ್ದರು. ಆದರೂ, ಅವರು ವಿಭಿನ್ನ ನಿಲುವು ಕೈಗೊಂಡರು. ಇದರಿಂದ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಯಿತು. ಆಂತರಿಕವಾಗಿ ಪಕ್ಷದಲ್ಲೇ ಅಸಮಾಧಾನ ಸೃಷ್ಟಿಯಾಯಿತು’ ಎಂದು ವಿಶ್ಲೇಷಿಸಿದ್ದಾರೆ.
ಪ್ರತ್ಯೇಕಗೊಂಡು ಗುಂಪು ಮಾಡಿಕೊಂಡಿರುವ ಲೋಕಜನಶಕ್ತಿಯ ಐವರು ಸಂಸದರು ಜೆಡಿಯು ಸೇರಲಿದ್ದಾರೆಯೇ ಎನ್ನುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಸಂಸದರು ಇನ್ನೂ ಹಲವಾರು ಪ್ರಕ್ರಿಯೆಗಳನ್ನು ಪೂರೈಸಬೇಕಾಗಿದೆ. ಆದರೆ, ಎನ್‌ಡಿಎನಲ್ಲಿ ಉಳಿಯುವುದಾಗಿ ಅವರೇ ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.