ADVERTISEMENT

ಚೌಕೀದಾರ್ 3.5 ಲಕ್ಷ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ, ರೈತರದ್ದಲ್ಲ: ರಾಹುಲ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 13:15 IST
Last Updated 11 ಫೆಬ್ರುವರಿ 2019, 13:15 IST
   

ಲಖನೌ: ಪ್ರತೀ ರಕ್ಷಣಾ ಒಪ್ಪಂದಗಳಲ್ಲಿಯೂ ಒಂದಲ್ಲ ಒಂದು ರೀತಿಯ ಭ್ರಷ್ಟಾಚಾರ ನಡೆಯುತ್ತದೆ. ಅನಿಲ್ ಅಂಬಾನಿಗಾಗಿ ನರೇಂದ್ರ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ. ಚೌಕೀದಾರ್ (ಮೋದಿ) ದೇಶದಲ್ಲಿರುವ 3.5 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾಮಾಡಿದ್ದಾರೆ ರೈತರದ್ದಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನರೇಂದ್ರ ಮೋದಿ ಈ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆಎಂಬುದನ್ನು ಜನರು ನೋಡಿದ್ದಾರೆ. ಚೌಕೀದಾರ್ 2 ಕೋಟಿ ಜನರಿಗೆ ಕೆಲಸ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯಾರಿಗೂ ಕೆಲಸ ಕೊಟ್ಟಿಲ್ಲ.ಅವರು ಲಾಭ ಮಾಡಿದ್ದು ಅನಿಲ್ ಅಂಬಾನಿಗೆ ಮಾತ್ರ .ಬಿಜೆಪಿ ವಿರುದ್ಧದ ಹೋರಾಟ ಅವರ ವಿಚಾರಧಾರೆಯ ವಿರುದ್ಧದ ಹೋರಾಟವಾಗಿದೆ ಎಂದಿದ್ದಾರೆ ರಾಹುಲ್.

ಪ್ರಿಯಾಂಕಾ ಮತ್ತು ಸಿಂಧ್ಯಾ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ್ನು ಬಲಪಡಿಸುತ್ತಾರೆ ಎಂದ ರಾಹುಲ್, ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರುವ ಗುರಿ ಹೊಂದಿದೆ.

ADVERTISEMENT

ನಾನುಮಾಯಾವತಿ ಮತ್ತು ಅಖಿಲೇಶ್ ಅವರನ್ನು ಗೌರವಿಸುತ್ತೇನೆ. ಆದರೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಲು ಎಲ್ಲ ಪಕ್ಷದೊಂದಿಗೆ ಹೋರಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.